ಬಿಜೆಪಿ ಸೇರದಿದ್ದರೆ ನಾಲ್ವರು ಆಪ್‌ ನಾಯಕರ ಬಂಧನ ಎಚ್ಚರಿಕೆ: ಆತಿಷಿ

| Published : Apr 03 2024, 01:35 AM IST / Updated: Apr 03 2024, 05:37 AM IST

ಬಿಜೆಪಿ ಸೇರದಿದ್ದರೆ ನಾಲ್ವರು ಆಪ್‌ ನಾಯಕರ ಬಂಧನ ಎಚ್ಚರಿಕೆ: ಆತಿಷಿ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನೊಂದು ತಿಂಗಳಲ್ಲಿ ಬಿಜೆಪಿ ಸೇರದಿದ್ದಲ್ಲಿ ನಿಮ್ಮನ್ನೂ ಸೇರಿದಂತೆ ಆಮ್‌ಆದ್ಮಿ ಪಕ್ಷದ ನಾಲ್ವರು ನಾಯಕರು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಲು ಸಿದ್ಧರಾಗಬೇಕು

ನವದೆಹಲಿ: ಇನ್ನೊಂದು ತಿಂಗಳಲ್ಲಿ ಬಿಜೆಪಿ ಸೇರದಿದ್ದಲ್ಲಿ ನಿಮ್ಮನ್ನೂ ಸೇರಿದಂತೆ ಆಮ್‌ಆದ್ಮಿ ಪಕ್ಷದ ನಾಲ್ವರು ನಾಯಕರು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಲು ಸಿದ್ಧರಾಗಬೇಕು ಎಂದು ಸ್ವತಃ ನನ್ನ ಆಪ್ತರ ಮೂಲಕ ಬಿಜೆಪಿ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ದೆಹಲಿ ಸಚಿವೆ ಆತಿಷಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಿಮ್ಮ ರಾಜಕೀಯ ಜೀವನ ಉಳಿಸಿಕೊಳ್ಳಬೇಕಿದ್ದರೆ ನೀವು ಬಿಜೆಪಿ ಸೇರಬೇಕು. ಇಲ್ಲದೇ ಹೋದಲ್ಲಿ ಮುಂದಿನ ಒಂದು ತಿಂಗಳ ಒಳಗಾಗಿ ಸಚಿವ ಸೌರವ್‌ ಭಾರಧ್ವಾಜ್‌, ಸಂಸದ ರಾಘವ್‌ ಛಡ್ಡಾ, ಶಾಸಕ ದುರ್ಗೇಶ್‌ ಪಾಠಕ್‌ ಮತ್ತು ಸ್ವತಃ ನೀವು ಕೂಡಾ ಬಂಧನಕಕ್ಕೊಳಗಾಗಲಿದ್ದೀರಿ ಎಂದು ಬಿಜೆಪಿಗರು ಸಂದೇಶ ರವಾನಿಸಿದ್ದಾರೆ ಎಂದು ಹೇಳಿದರು.

ಈ ನಡುವೆ ಆತಿಷಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್‌ದೇವ್‌, ಇಂಥ ಆರೋಪದ ಕುರಿತು ಆತಿಷಿ ಸಾಕ್ಷ್ಯ ನೀಡಬೇಕು ಇಲ್ಲದೇ ಕಾನೂನು ಕ್ರಮ ಎದುರಿಸಲು ಸಿದ್ದರಾಗಿರಬೇಕು ಎಂದು ಎಚ್ಚರಿಸಿದ್ದಾರೆ.