ಕೋರ್ಟ್‌ ಕಲಾಪ ಅಕ್ರಮ ವಿಡಿಯೋ ಪ್ರಸಾರ: ಕೇಜ್ರಿ ಪತ್ನಿ ವಿರುದ್ಧ ದೂರು ದಾಖಲು

| Published : Apr 06 2024, 12:53 AM IST / Updated: Apr 06 2024, 05:29 AM IST

ಕೋರ್ಟ್‌ ಕಲಾಪ ಅಕ್ರಮ ವಿಡಿಯೋ ಪ್ರಸಾರ: ಕೇಜ್ರಿ ಪತ್ನಿ ವಿರುದ್ಧ ದೂರು ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮವಾಗಿ ಚಿತ್ರೀಕರಿಸಲಾಗಿದ್ದ ಕೋರ್ಟ್‌ ಕಲಾಪದ ಆಡಿಯೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರ ಪತ್ನಿ ಸುನಿತಾ ವಿರುದ್ಧ ದೆಹಲಿ ಹೈಕೋರ್ಟ್ ವಕೀಲ ವೈಭವ್ ಸಿಂಗ್ ದೂರು ದಾಖಲಿಸಿದ್ದಾರೆ.

ನವದೆಹಲಿ: ಅಕ್ರಮವಾಗಿ ಚಿತ್ರೀಕರಿಸಲಾಗಿದ್ದ ಕೋರ್ಟ್‌ ಕಲಾಪದ ಆಡಿಯೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರ ಪತ್ನಿ ಸುನಿತಾ ವಿರುದ್ಧ ದೆಹಲಿ ಹೈಕೋರ್ಟ್ ವಕೀಲ ವೈಭವ್ ಸಿಂಗ್ ದೂರು ದಾಖಲಿಸಿದ್ದಾರೆ.

 ಉದ್ದೇಶಪೂರ್ವಕವಾಗಿ ಮತ್ತು ಜನರ ಸಹಾನುಭೂತಿ ಪಡೆಯಲು ಕೇಜ್ರಿವಾಲ್‌ ಪತ್ನಿ ಈ ಕಲಾಪವನ್ನು ರೆಕಾರ್ಡ್‌ ಮಾಡಿದ್ದಾರೆಂದು ಸಿಂಗ್‌ ತಿಳಿಸಿದ್ದಾರೆ. ಮಾ.28 ರಂದು ಕೇಜ್ರಿವಾಲ್‌ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರು ಪಡಿಸಿ, ವಿಚಾರಣೆ ನಡೆಸುವ ವೇಳೆ ಕಲಾಪವನ್ನು ರೆಕಾರ್ಡ್ ಮಾಡಿದ್ದು, ಅದನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.