ಸಾರಾಂಶ
ದೆಹಲಿ, ಬೆಂಗಳೂರಿನ ಶಾಲೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ರವಾನೆಯಾದ ಬೆನ್ನಲ್ಲೇ ಇದೀಗ ರಾಜಸ್ಥಾನದ ಜೈಪುರ ಮತ್ತು ಉತ್ತರ ಪ್ರದೇಶದ ಲಖನೌನ ಕೆಲ ಶಾಲೆಗಳಿಗೆ ಇ ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಸಂದೇಶ ರವಾನಿಸಿದ್ದಾರೆ.
ಜೈಪುರ/ಲಖನೌ: ದೆಹಲಿ, ಬೆಂಗಳೂರಿನ ಶಾಲೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ರವಾನೆಯಾದ ಬೆನ್ನಲ್ಲೇ ಇದೀಗ ರಾಜಸ್ಥಾನದ ಜೈಪುರ ಮತ್ತು ಉತ್ತರ ಪ್ರದೇಶದ ಲಖನೌನ ಕೆಲ ಶಾಲೆಗಳಿಗೆ ಇ ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಸಂದೇಶ ರವಾನಿಸಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಜೈಪುರದ 50 ಮತ್ತು ಲಖನೌನ ಮೂರು ಶಾಲೆಗಳಿಗೆ ಕಿಡಿಗೇಡಿಗಳು ಬೆದರಿಕೆ ಸಂದೇಶವನ್ನು ಕಳುಹಿಸಿದ್ದರು. ಶಾಲೆ ಆವರಣದಲ್ಲಿ ಸ್ಫೋಟಕ ಟಿಸುವ ಬಗ್ಗೆ ಇ ಮೇಲ್ ಸಂದೇಶ ಬಂದಿತ್ತು. ಆದರೆ ಅದೃಷ್ಟವಶಾತ್ ಪೊಲೀಸರ ತನಿಖೆ ವೇಳೆ ಯಾವುದೇ ಸ್ಫೋಟಕಗಳು ಪತ್ತೆಯಾಗಿರಲಿಲ್ಲ.
ಈ ತಿಂಗಳ ಆರಂಭದಲ್ಲಿ ದೆಹಲಿಯ ಸುಮಾರು 250 ಶಾಲೆಗಳಿಗೆ ಇದೇ ರೀತಿಯಲ್ಲಿಯೇ ಬಾಂಬ್ ಬೆದರಿಕೆಯ ಇಮೇಲ್ ಬಂದಿತ್ತು. ಭಾನುವಾರವಷ್ಟೇ ರಾಷ್ಟ್ರ ರಾಜಧಾನಿಯ 20 ಆಸ್ಪತ್ರೆ, ದೆಹಲಿ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಕ್ಕೂ ಬೆದರಿಕೆ ಕರೆ ಬಂದಿತ್ತು.