ಪಂಜಾಬ್‌ ಗಡಿಯಲ್ಲಿ ಮತ್ತೊಬ್ಬ ರೈತ ಸಾವು: ಸಂಖ್ಯೆ 4ಕ್ಕೆ ಏರಿಕೆ

| Published : Feb 24 2024, 02:33 AM IST / Updated: Feb 24 2024, 08:39 AM IST

ಪಂಜಾಬ್‌ ಗಡಿಯಲ್ಲಿ ಮತ್ತೊಬ್ಬ ರೈತ ಸಾವು: ಸಂಖ್ಯೆ 4ಕ್ಕೆ ಏರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹೃದಯಾಘಾತದಿಂದ ಪ್ರತಿಭಟನಾನಿರತ ರೈತ ದರ್ಶನ್‌ ಸಿಂಗ್‌ ಸಾವು ಹೊಂದಿದ್ದು, ಅವರ ಕುಟುಂಬಸ್ಥರಿಗೆ ಶೀಘ್ರ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ನೀಡುವಂತೆ ಸರ್ಕಾರಕ್ಕೆ ರೈತ ನಾಯಕ ಪಂಧೇರ್‌ ಆಗ್ರಹಿಸಿದ್ದಾರೆ.

ಪಟಿಯಾಲಾ: ರೈತರು ಪ್ರತಿಭಟನೆ ಮಾಡುತ್ತಿರುವ ಪಂಜಾಬ್‌ನ ಖನೌರಿ ಗಡಿಯಲ್ಲಿ ಶುಕ್ರವಾರ ಮತ್ತೊಬ್ಬ ರೈತ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ರೈತ ನಾಯಕ ಸರವಣ್‌ ಸಿಂಗ್‌ ತಿಳಿಸಿದ್ದಾರೆ. 

ಇದರೊಂದಿಗೆ ಕಳೆದ 10 ದಿನಗಳಲ್ಲಿ ಪ್ರತಿಭಟನಾನಿರತ ರೈತರ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಂಗ್‌, ‘ಬಠಿಂಡಾ ಜಿಲ್ಲೆಯ ಅಮರಗಢದ ರೈತ ದರ್ಶನ್‌ ಸಿಂಗ್‌ ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪುವ ಮೂಲಕ ಹುತಾತ್ಮರಾಗಿದ್ದಾರೆ. 

ಅವರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡುವ ಜೊತೆಗೆ ಸೂಕ್ತ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸುತ್ತೇವೆ’ ಎಂದಿದ್ದಾರೆ.

ಇತ್ತೀಚೆಗೆ 3 ರೈತರು ಅಸ್ವಸ್ಥರಾಗಿ ಸಾವನ್ನಪ್ಪಿದ್ದರೆ, ಹಿಂಸಾಚಾರದಲ್ಲಿ ಒಬ್ಬ ರೈತ ಮೊನ್ನೆ ಬಲಿಯಾಗಿದ್ದ.