ಸಾರಾಂಶ
ನಾನು ಮನೆಯಲ್ಲಿದ್ದಾಗ ದೊಡ್ಡ ಸದ್ದು ಕೇಳಿತು. ಏನಾಯಿತೆಂದು ನೋಡಲು ಹೊರಬಂದಾಗ ಆಕಾಶದಲ್ಲಿ ಆವರಿಸಿದ್ದ ಕಪ್ಪು ಹೊಗೆ ಕಾಣಿಸಿತು. ಹತ್ತಿರ ಬಂದಾಗ ಎಲ್ಲೆಲ್ಲೂ ಶವಗಳು ಮತ್ತು ವಿಮಾನದ ಅವಶೇಷಗಳೇ ಕಾಣುತ್ತಿದ್ದವು’. ಇವು, ವಿಮಾನ ದುರಂತಕ್ಕೆ ಸಾಕ್ಷಿಯಾದ ಪ್ರತ್ಯಕ್ಷದರ್ಶಿಯೊಬ್ಬರ ಮಾತುಗಳು.
ಅಹಮದಾಬಾದ್: ‘ನಾನು ಮನೆಯಲ್ಲಿದ್ದಾಗ ದೊಡ್ಡ ಸದ್ದು ಕೇಳಿತು. ಏನಾಯಿತೆಂದು ನೋಡಲು ಹೊರಬಂದಾಗ ಆಕಾಶದಲ್ಲಿ ಆವರಿಸಿದ್ದ ಕಪ್ಪು ಹೊಗೆ ಕಾಣಿಸಿತು. ಹತ್ತಿರ ಬಂದಾಗ ಎಲ್ಲೆಲ್ಲೂ ಶವಗಳು ಮತ್ತು ವಿಮಾನದ ಅವಶೇಷಗಳೇ ಕಾಣುತ್ತಿದ್ದವು’. ಇವು, ವಿಮಾನ ದುರಂತಕ್ಕೆ ಸಾಕ್ಷಿಯಾದ ಪ್ರತ್ಯಕ್ಷದರ್ಶಿಯೊಬ್ಬರ ಮಾತುಗಳು. ಘಟನೆ ಬಗ್ಗೆ ಮಾತನಾಡಿದ ಪ್ರತ್ಯಕ್ಷದರ್ಶಿ ಹರೇಶ್ ಶಾ, ‘ವಿಮಾನ ಅಪಘಾತಕ್ಕೆ ತುತ್ತಾಗುವ ಮುನ್ನ ಕಡಿಮೆ ಎತ್ತರದಲ್ಲಿ ಹಾರುತ್ತಿತ್ತು. ಅದು ಕಟ್ಟಡಕ್ಕೆ ಅಪ್ಪಳಿಸುತ್ತಿದ್ದಂತೆ ವಿಮಾನ ಮತ್ತು ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದರ ಬೆನ್ನಲ್ಲೇ ದಟ್ಟ ಹೊಗೆ ಎದ್ದಿತು. ಘಟನೆ ನಡೆದಲ್ಲಿಗೆ ಹೋಗಾದ, ಎಲ್ಲಿ ನೋಡಿದರೂ ಸುಟ್ಟು ಕರಕಲಾದ ಮೃತ ದೇಹಗಳು ಮತ್ತು ಛಿದ್ರವಾದ ವಿಮಾನದ ಭಾಗಗಳು ಕಾಣಿಸುತ್ತಿದ್ದವು’ ಎಂದು ಹೇಳಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ವಿಮಾನದತ್ತ ಧಾವಿಸಿದ್ದು, ವಿಮಾನ ಮತ್ತು ಕಟ್ಟಡದಲ್ಲಿದ್ದವರನ್ನು ರಕ್ಷಿಸಲು ಹರಸಾಹಸಪಡುತ್ತಿದ್ದರು.