ಪ್ರತಿದಿನ 2 ಇನ್ಸುಲಿನ್‌ ಪಡೆಯಲು ಏಮ್ಸ್‌ ವೈದ್ಯರು ಸೂಚನೆ ನೀಡಿ ಉಳಿದಂತೆ ಬಂಧಿತ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆರೋಗ್ಯವಾಗಿದ್ದಾರೆ ಎಂದು ವರದಿ ನೀಡಿದ್ದಾರೆ.

ನವದೆಹಲಿ: ಮದ್ಯ ಲೈಸೆನ್ಸ್‌ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಂಪೂರ್ಣ ಆರೋಗ್ಯವಂತರಾಗಿದ್ದಾರೆ ಎಂದು ಏಮ್ಸ್‌ ವೈದ್ಯರ ತಂಡ ದೃಢೀಕರಿಸಿದೆ.

ದೆಹಲಿ ಹೈಕೋರ್ಟ್‌ ನಿರ್ದೇಶನದ ಮೇರೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅರವಿಂದ್‌ ಕೇಜ್ರಿವಾಲ್‌ರನ್ನು ಪರೀಕ್ಷಿಸಿದ ಐದು ಜನರ ವೈದ್ಯ ತಂಡ, ಅವರು ಸಂಪೂರ್ಣ ಆರೋಗ್ಯವಂತರಾಗಿ ಇದ್ದಾರೆ. ಆದರೆ ಪ್ರತಿದಿನ ಎರಡು ಡೋಸ್‌ ಇನ್ಸುಲಿನ್‌ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.

ಅರ್ಧ ತಾಸು ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ತಿಹಾರ್‌ ಜೈಲಿನ ಇಬ್ಬರು ವೈದ್ಯರೂ ಹಾಜರಿದ್ದರು. ಪ್ರತಿದಿನ ಅರ್ಧ ತಾಸು ತಮ್ಮ ವೈದ್ಯರ ಜೊತೆ ಸಮಾಲೋಚಿಸಲು ಅವಕಾಶ ನೀಡಬೇಕೆಂಬ ಕೇಜ್ರಿವಾಲ್‌ ಮನವಿಯನ್ನು ಇತ್ತೀಚೆಗೆ ನ್ಯಾಯಾಲಯವು ನಿರಾಕರಿಸಿತ್ತು.