ಏರಿಂಡಿಯಾ ತಾಂತ್ರಿಕ ದೋಷ: 3 ದಿನ ಥಾಯ್ಲೆಂಡಲ್ಲಿ ಸಿಕ್ಕಿಬಿದ್ದು 100 ಪ್ರಯಾಣಿಕರಿಗೆ ಗೋಳು

| Published : Nov 20 2024, 12:34 AM IST

ಏರಿಂಡಿಯಾ ತಾಂತ್ರಿಕ ದೋಷ: 3 ದಿನ ಥಾಯ್ಲೆಂಡಲ್ಲಿ ಸಿಕ್ಕಿಬಿದ್ದು 100 ಪ್ರಯಾಣಿಕರಿಗೆ ಗೋಳು
Share this Article
  • FB
  • TW
  • Linkdin
  • Email

ಸಾರಾಂಶ

ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ 100 ಭಾರತೀಯ ಪ್ರಯಾಣಿಕರು 3 ದಿನಗಳ ಕಾಲ ಥಾಯ್ಲೆಂಡ್‌ನಲ್ಲಿ ಸಿಕ್ಕಿಬಿದ್ದು ಗೋಳು ಅನುಭವಿಸಿದ ಪ್ರಕರಣ ನಡೆದಿದೆ.

ಫುಕೆಟ್‌ (ಥಾಯ್ಲೆಂಡ್‌): ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ 100 ಭಾರತೀಯ ಪ್ರಯಾಣಿಕರು 3 ದಿನಗಳ ಕಾಲ ಥಾಯ್ಲೆಂಡ್‌ನಲ್ಲಿ ಸಿಕ್ಕಿಬಿದ್ದು ಗೋಳು ಅನುಭವಿಸಿದ ಪ್ರಕರಣ ನಡೆದಿದೆ. ಮಂಗಳವಾರ ಸಂಜೆ ವೇಳೆಗೆ ಪ್ರಕರಣ ಸುಖಾಂತ್ಯವಾಗಿದ್ದು ಎಲ್ಲಾ ಪ್ರಯಾಣಿಕರು ತವರಿಗೆ ಮರಳಿದ್ದಾರೆ.

ನ.16ರಂದು ರಾತ್ರಿ ಏರಿಂಡಿಯಾ ವಿಮಾನ ಫುಕೆಟ್‌ನಿಂದ ನವದೆಹಲಿಗೆ ಹೊರಡಬೇಕಿತ್ತು. ಆದರೆ ತಾಂತ್ರಿಕ ದೋಷದ ಕಾರಣದಿಂದ ಸಂಚಾರ 6 ಗಂಟೆ ವಿಳಂಬವಾಗುತ್ತದೆ ಎಂದು ಮೊದಲಿಗೆ ಹೇಳಲಾಗಿತ್ತು. ಹೀಗಾಗಿ ನ.17ರಂದು ಬೆಳಗ್ಗೆ ಬೇರೊಂದು ವಿಮಾನಕ್ಕೆ ಎಲ್ಲರನ್ನೂ ಹತ್ತಿಸಲಾಯಿತು. ಆದರೆ ಎಲ್ಲರೂ ಹತ್ತಿಕುಳಿತ ಮೇಲೆ ಆ ವಿಮಾನವೂ ರದ್ದಾಗಿದೆ ಎಂದು ಸಂಸ್ಥೆ ಘೋಷಿಸಿದೆ. ಇಷ್ಟು ಸಾಲದೆಂಬಂತೆ ಬಳಿಕ ಮತ್ತೊಂದು ವಿಮಾನದಲ್ಲಿ ಪ್ರಯಾಣ ಆರಂಭಿಸಿದ 2 ಗಂಟೆಗಳ ಬಳಿಕ ಮತ್ತೆ ಆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ವಿಮಾನವನ್ನು ಮರಳಿ ಫುಕೆಟ್‌ಗೆ ತಂದು ತುರ್ತು ಭೂಸ್ಪರ್ಶ ಮಾಡಲಾಗಿದೆ.

ಹೀಗಾಗಿ ವೃದ್ಧರು, ಮಕ್ಕಳು ಸೇರಿದಂತೆ 100 ಪ್ರಯಾಣಿಕರು 3 ದಿನಗಳ ಕಾಲ ಇನ್ನಿಲ್ಲದ ಕಷ್ಟ ಎದುರಿಸಿದ್ದಾರೆ. ಬಳಿಕ ಮಂಗಳವಾರ ಬೆಳಗ್ಗೆ ಪ್ರತ್ಯೇಕ ವಿಮಾನಗಳಲ್ಲಿ ಎಲ್ಲಾ ಪ್ರಯಾಣಿಕರನ್ನು ನವದೆಹಲಿಗೆ ಕರೆ ತರಲಾಗಿದೆ.