ಭಾರತೀಯ ಪೌರತ್ವ ಪಡೆದ ಬಳಿಕ ಅಕ್ಷಯ್‌ ಮೊದಲ ಮತ

| Published : May 21 2024, 12:43 AM IST / Updated: May 21 2024, 05:25 AM IST

ಭಾರತೀಯ ಪೌರತ್ವ ಪಡೆದ ಬಳಿಕ ಅಕ್ಷಯ್‌ ಮೊದಲ ಮತ
Share this Article
  • FB
  • TW
  • Linkdin
  • Email

ಸಾರಾಂಶ

2023ರಲ್ಲಿ ಭಾರತೀಯ ಪೌರತ್ವ ಪಡೆದಿದ್ದ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮೊದಲ ಬಾರಿಗೆ ಮತ ಚಲಾಯಿಸುವ ಅವಕಾಶ ಪಡೆದರು.

ಮುಂಬೈ: ಕಳೆದ ವರ್ಷವಷ್ಟೇ ಭಾರತೀಯ ಪೌರತ್ವ ನಡೆದಿದ್ದ ಖ್ಯಾತ ನಟ ಅಕ್ಷಯ್‌ ಕುಮಾರ್‌, ಸೋಮವಾರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದರು. ಭಾರತೀಯ ನಾಗರಿಕತ್ವ ಪಡೆದ ಬಳಿ ಅವರು ಮತ ಹಾಕಿದ್ದು ಇದೇ ಮೊದಲು.

90ರ ದಶಕದಲ್ಲಿ ತಮ್ಮ 15 ಚಿತ್ರಗಳು ಸತತ ಸೋಲುಕಂಡ ಬೆನ್ನಲ್ಲೇ ಅಕ್ಷಯ್‌ ಕೆನಡಾ ಪೌರತ್ವಕ್ಕೆ ಅರ್ಜಿ ಸಲ್ಲಿಸಿ ಅದನ್ನು ಪಡೆದುಕೊಂಡಿದ್ದರು. ಹೀಗಾಗಿ ಭಾರತದಲ್ಲಿ ಮತದಾನದ ಅವಕಾಶ ಕಳೆದುಕೊಂಡಿದ್ದರು.

ಈ ನಡುವೆ ಕಳೆದ ದಶಕದಲ್ಲಿ ಮತ್ತೆ ಹಿಂದಿ ಚಿತ್ರರಂಗದಲ್ಲಿ ಅವರ ಚಿತ್ರಗಳು ಯಶಸ್ವಿಯಾದ ಬೆನ್ನಲ್ಲೇ 2019ರಲ್ಲಿ ಭಾರತೀಯ ಪೌರತ್ವ ಕೋರಿ ಅರ್ಜಿ ಸಲ್ಲಿಸಿದ್ದರು. ಸರ್ಕಾರ, 2023ರಲ್ಲಿ ಅವರಿಗೆ ಪೌರತ್ವ ನೀಡಿತ್ತು.