ರಷ್ಯಾ ಅಧ್ಯಕ್ಷ ಪುಟಿನ್‌ ವಿರೋಧಿ ನವ್ಲಾನಿ ಎದೆಗೆ ಗುದ್ದಿ ಹತ್ಯೆ

| Published : Feb 25 2024, 01:49 AM IST / Updated: Feb 25 2024, 08:53 AM IST

ಸಾರಾಂಶ

ಇತ್ತೀಚೆಗೆ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದ ವಿಪಕ್ಷ ನಾಯಕ ನವ್ಲಾನಿಯನ್ನು ಸರ್ಕಾರವೇ ಎದೆಗೆ ಗುದ್ದಿ ಕಡಿಮೆ ತಾಪಮಾನದಲ್ಲಿ ಇರಿಸಿ ಮರಣದಂಡನೆ ವಿಧಿಸಿ ಹತ್ಯೆ ಮಾಡಿದೆ ಎಂದು ರಷ್ಯಾದ ಮಾನವ ಹಕ್ಕು ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

ಮಾಸ್ಕೋ: ಇತ್ತೀಚೆಗೆ ರಷ್ಯಾದ ಜೈಲಿನಲ್ಲಿ ದಿಢೀರ್‌ ಸಾವನ್ನಪ್ಪಿದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಕಡುವಿರೋಧಿ, ಪ್ರತಿಪಕ್ಷ ನಾಯಕ ಅಲೆಕ್ಸಿ ನವ್ಲಾನಿಯನ್ನು ಎದೆಗೆ ಗುದ್ದಿ ಹತ್ಯೆ ಮಾಡಲಾಗಿದೆ ಎಂದು ಮಾನವ ಹಕ್ಕು ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

ಹೀಗೆ ಎದೆಗೆ ಗುದ್ದಿ ಹತ್ಯೆ ಮಾಡುವುದು ರಷ್ಯಾದ ವಿದೇಶಿ ಗುಪ್ತಚರ ಸಂಸ್ಥೆ ಕೆಜೆಬಿಯ ಹಳೆಯ ತಂತ್ರ ಎಂದು ವ್ಲಾಡಿಮಿರ್‌ ಒಶ್ಕಿನ್‌ ಹೇಳಿದ್ದಾರೆ.

ಮೊದಲಿಗೆ ನವ್ಲಾನಿಯನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿ ಬಂಧಿಸಲಾಗಿತ್ತು. ನಂತರ ಅವರ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದ ಬಳಿಕ ಅವರ ಹೃದಯಕ್ಕೆ ಬಲವಾಗಿ ಒಂದು ಬಾರಿ ಥಳಿಸುವ ಮೂಲಕ ಸಾಯಿಸಲಾಗಿದೆ ಎಂದು ತಿಳಿಸಿದ್ದಾರೆ.