ಸಾರಾಂಶ
ಇ–ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ ಜಾಗತಿಕವಾಗಿ ವ್ಯವಸ್ಥಾಪಕ ಹುದ್ದೆಗಳಲ್ಲಿರುವ ತನ್ನ 14000ಕ್ಕೂ ಅಧಿಕ ನೌಕರರನ್ನು ವಜಾಗೊಳಿಸಲು ಮುಂದಾಗಿದೆ. ಈ ಕ್ರಮದಿಂದ ವ್ಯವಸ್ಥಾಪಕರ ಸಂಖ್ಯೆ 10,5770ರಿಂದ 91,936ಕ್ಕೆ ಇಳಿಯಲಿದೆ. ಅಲ್ಲದೆ, ಕಂಪನಿಗೆ 10-30 ಸಾವಿರ ಕೋಟಿ ರು. ಉಳಿತಾಯವಾಗಲಿದೆ ಎಂದು ವರದಿಗಳು ತಿಳಿಸಿವೆ.
ನವದೆಹಲಿ: ಇ–ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ ಜಾಗತಿಕವಾಗಿ ವ್ಯವಸ್ಥಾಪಕ ಹುದ್ದೆಗಳಲ್ಲಿರುವ ತನ್ನ 14000ಕ್ಕೂ ಅಧಿಕ ನೌಕರರನ್ನು ವಜಾಗೊಳಿಸಲು ಮುಂದಾಗಿದೆ. ಈ ಕ್ರಮದಿಂದ ವ್ಯವಸ್ಥಾಪಕರ ಸಂಖ್ಯೆ 10,5770ರಿಂದ 91,936ಕ್ಕೆ ಇಳಿಯಲಿದೆ. ಅಲ್ಲದೆ, ಕಂಪನಿಗೆ 10-30 ಸಾವಿರ ಕೋಟಿ ರು. ಉಳಿತಾಯವಾಗಲಿದೆ ಎಂದು ವರದಿಗಳು ತಿಳಿಸಿವೆ.
ನೌಕರರ ವೈಯಕ್ತಿಕ ಕೊಡುಗೆ ಮತ್ತು ಕಂಪನಿಯ ಕಾರ್ಯಕ್ಷಮತೆ ಹೆಚ್ಚಿಸುವುದು, ಅಧಿಕಾರಶಾಹಿತ್ವವನ್ನು ಕಡಿಮೆ ಮಾಡುವುದು ಮತ್ತು ಕಾರ್ಯಚಟುವಟಿಕೆಗಳನ್ನು ವೇಗಗೊಳಿಸುವುದು ಮೊದಲಾದ ಉದ್ದೇಶಗಳಿಂದ ಕಂಪನಿಯ ಸಿಇಒ ಆ್ಯಂಡಿ ಜಸ್ಸಿ ನೌಕರರ ವಜಾ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ 2026ರಲ್ಲೀ 13000ಕ್ಕೂ ಹೆಚ್ಚು ನೌಕರರ ತೆಗೆದುಹಾಕಲು ಕಂಪನಿ ಯೋಜಿಸಿದೆ ಎನ್ನಲಾಗಿದೆ.2020ರಿಂದ 2022ರ ನಡುವೆ ಕಂಪನಿ ಜಾಗತಿಕವಾಗಿ ತನ್ನ ಉದ್ಯೋಗಿಳ ಸಂಖ್ಯೆಯನ್ನು ದ್ವಿಗುಣಗೊಳಿಸಿತ್ತು. ಬಳಿಕ ಆರ್ಥಿಕ ಸಂಕಷ್ಟದಿಂದ 2023ರಲ್ಲಿ 18,000 ನೌಕರರನ್ನು ವಜಾಗೊಳಿಸಿತ್ತು.