ನೆಕ್ಲೇಸ್ ಮಾಡಲು ಕೀನ್ಯಾದಿಂದಅಮೆರಿಕಕ್ಕೆ ಜಿರಾಫೆ ಮಲ ತಂದಳು!
KannadaprabhaNewsNetwork | Published : Oct 10 2023, 01:01 AM IST
ನೆಕ್ಲೇಸ್ ಮಾಡಲು ಕೀನ್ಯಾದಿಂದಅಮೆರಿಕಕ್ಕೆ ಜಿರಾಫೆ ಮಲ ತಂದಳು!
ಸಾರಾಂಶ
ಅಮೆರಿಕದಿಂದ ಕೀನ್ಯಾಗೆ ಹೋಗಿದ್ದ ಮಹಿಳೆಯೊಬ್ಬಳು ಅಲ್ಲಿಂದ ಜಿರಾಫೆಯ ಮಲವನ್ನು ಹೊತ್ತು ತಂದಿದ್ದಾಳೆ.
ಶಾಕ್ ಆಯ್ತಾ.. ಆಗ್ಲೇಬೇಕು. ವಿದೇಶಕ್ಕೆ ಹೋದ್ರೆ ನಾವು ನೀವೆಲ್ಲ ಅಲ್ಲಿ ಏನ್ ಕಡಿಮೆ ಬೆಲೆ ಚೆನ್ನಾಗಿರೋ ವಸ್ತು ಸಿಗುತ್ತೋ ಅದನ್ನು ತೆಗೆದುಕೊಂಡು ಬರ್ತೀವಿ. ಆದರೆ ಅಮೆರಿಕದಿಂದ ಕೀನ್ಯಾಗೆ ಹೋಗಿದ್ದ ಮಹಿಳೆಯೊಬ್ಬಳು ಅಲ್ಲಿಂದ ಜಿರಾಫೆಯ ಮಲವನ್ನು ಹೊತ್ತು ತಂದಿದ್ದಾಳೆ. ಅಮೆರಿಕದ ವಿಮಾನ ನಿಲ್ದಾಣದಲ್ಲಿನ ಅಧಿಕಾರಿಗಳು ಮಹಿಳೆಯಿಂದ ಮಲವಿದ್ದ ಪೆಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೊಂದು ಆಶ್ಚರ್ಯ ಅಂದ್ರೆ ಆಕೆ ಮಲವನ್ನು ತಂದಿದ್ದು ನೆಕ್ಲೇಸ್ ಮಾಡೋಕಂತೆ. ಈ ಹಿಂದೆಯೂ ಸಾರಂಗದ ಮಲದಿಂದ ಆಕೆ ನೆಕ್ಲೇಸ್ ತಯಾರಿಸಿದ್ದಳಂತೆ. ಹೇಗೆ ಅಂತಾ ಮಾತ್ರ ನಮ್ಮನ್ನ ಕೇಳ್ಬೇಡಿ.