- ಮೋದಿ-ರಾಷ್ಟ್ರಪತಿ ಭೇಟಿ ಬೆನ್ನಲ್ಲೇ ಗುಸುಗುಸುನವದೆಹಲಿ: ಇತ್ತೀಚೆಗೆ ರಾಜ್ಯಸಭೆ ನಾಮನಿರ್ದೇನದಿಂದ ವಂಚಿತರಾಗಿದ್ದ ಕೇಂದ್ರ ಸಚಿವ ಜಾರ್ಜ್‌ ಕುರಿಯನ್‌ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಇದರ ನಡುವೆ ಅಪರೂಪಕ್ಕೆಂಬಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸಭೆ ನಡೆಸಿದ್ದಾರೆ. ಇದು ಸಂಪುಟ ಪುನಾರಚನೆ ಗುಸುಗುಸಿಗೆ ಪುನಃ ನಾಂದಿ ಹಾಡಿದೆ.

ಇತ್ತೀಚೆಗೆ ಕೆಲವು ಕೇಂದ್ರ ಸಚಿವರನ್ನು ಬೇರೆ ಬೇರೆ ರಾಜ್ಯಗಳಲ್ಲಿ ಪಕ್ಷದ ಕರ್ತವ್ಯಗಳಿಗೆ ನಿಯೋಜನೆ ಮಾಡಲಾಗಿತ್ತು. ಆಗಲೇ ಈ ಬಗ್ಗೆ ಪುಕಾರುಗಳು ಎದ್ದಿದ್ದವು. ಇದರ ಬೆನ್ನಲ್ಲೇ ಕೇಂದ್ರ ಸಚಿವರಾದ ಕುರಿಯನ್‌ ಹಾಗೂ ರಣವೀತ್‌ ಸಿಂಗ್‌ ಬಿಟ್ಟು ಅವರನ್ನು ರಾಜ್ಯಸಭೆಗೆ ಪುನಃ ನಾಮನಿರ್ದೇಶನ ಮಾಡಿರಲಿಲ್ಲ. ಇದೀಗ ಈ ಪೈಕಿ ಕುರಿಯನ್‌ ರಾಜೀನಾಮೆ ನೀಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಮುರ್ಮು ಅವರನ್ನು ಮೋದಿ ಭೇಟಿ ಮಾಡಿದ್ದಾರೆ. ಇದು ಮೋದಿ-3.0 ಸರ್ಕಾರಕ್ಕೆ 2 ವರ್ಷ ಆದ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಯ ಮುನ್ಸೂಚನೆ ಎಂಬ ವಿಶ್ಲೇಷಣ ಕೇಳಿಬಂದಿದೆ.