ಮೀಸಲಾತಿಗೆ ಎಂದಿಗೂ ನಮ್ಮ ಬೆಂಬಲವಿದೆ: ಆರ್‌ಎಸ್‌ಎಸ್‌

| Published : Apr 29 2024, 01:41 AM IST / Updated: Apr 29 2024, 04:53 AM IST

ಮೀಸಲಾತಿಗೆ ಎಂದಿಗೂ ನಮ್ಮ ಬೆಂಬಲವಿದೆ: ಆರ್‌ಎಸ್‌ಎಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೀಸಲಾತಿಯನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರೋಧಿಸುತ್ತವೆ ಎಂದು ಪ್ರತಿಪಕ್ಷಗಳು ನಿರಂತರ ಆರೋಪ ಮಾಡುತ್ತಿರುವಾಗಲೇ, ಸಂವಿಧಾನಬದ್ಧವಾಗಿ ಮೀಸಲಾತಿಯನ್ನು ಆರ್‌ಎಸ್‌ಎಸ್‌ ಎಂದಿಗೂ ಬೆಂಬಲಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸ್ಪಷ್ಟಪಡಿಸಿದ್ದಾರೆ.

 ಹೈದರಾಬಾದ್‌ :  ಮೀಸಲಾತಿಯನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರೋಧಿಸುತ್ತವೆ ಎಂದು ಪ್ರತಿಪಕ್ಷಗಳು ನಿರಂತರ ಆರೋಪ ಮಾಡುತ್ತಿರುವಾಗಲೇ, ಸಂವಿಧಾನಬದ್ಧವಾಗಿ ಮೀಸಲಾತಿಯನ್ನು ಆರ್‌ಎಸ್‌ಎಸ್‌ ಎಂದಿಗೂ ಬೆಂಬಲಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದ ಅವರು, ಆರ್‌ಎಸ್‌ಎಸ್‌ ಮೀಸಲಾತಿ ವ್ಯವಸ್ಥೆಗೆ ವಿರುದ್ಧವಿದೆ ಎಂಬ ವಿಡಿಯೋವೊಂದು ಹರಿದಾಡುತ್ತಿದೆ. ಅದು ಸುಳ್ಳು. ಮೀಸಲಾತಿ ಆರಂಭವಾದಾಗಿನಿಂದಲೂ ಸಂವಿಧಾನಬದ್ಧವಾಗಿ ಅದನ್ನು ಆರ್‌ಎಸ್‌ಎಸ್‌ ಬೆಂಬಲಿಸಿಕೊಂಡು ಬಂದಿದೆ ಎಂದು ಹೇಳಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮೀಸಲಾತಿ ಸಂಬಂಧ ವಾಕ್ಸಮರ ನಡೆಯುತ್ತಿರುವ ಸಂದರ್ಭದಲ್ಲೇ ಭಾಗವತ್‌ ಅವರು ಈ ಹೇಳಿಕೆ ನೀಡಿರುವುದು ಗಮನಾರ್ಹ. ಶನಿವಾರವಷ್ಟೇ ಮಾತನಾಡಿದ್ದ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು, ಆರ್‌ಎಸ್‌ಎಸ್‌- ಬಿಜೆಪಿ ಮೀಸಲಾತಿಯನ್ನು ವಿರೋಧಿಸುತ್ತವೆ ಎಂದು ಟೀಕಿಸಿದ್ದರು.

ತಾರತಮ್ಯ ಮೇಲ್ನೋಟಕ್ಕೆ ಕಾಣದೇ ಇದ್ದರೂ ಅದು ಇದೆ. ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ನಾಗಪುರದಲ್ಲಿ ಕಳೆದ ವರ್ಷವೇ ಭಾಗವತ್‌ ಅವರು ಸ್ಪಷ್ಟಪಡಿಸಿದ್ದರು.