ವಿಚ್ಛೇದನ ಪ್ರಕರಣ : ಜೀವನಾಂಶದ ಮೊತ್ತವನ್ನು ನಿರ್ಧರಿಸಲು 8 ಅಂಶ ರೂಪಿಸಿದ ಸುಪ್ರೀಂ ಕೋರ್ಟ್

| Published : Dec 13 2024, 12:49 AM IST / Updated: Dec 13 2024, 04:20 AM IST

ಸಾರಾಂಶ

 ಜೀವನಾಂಶಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಟೆಕ್ಕಿ ಅತುಲ್‌ ಸುಭಾಷ್‌ ಆತ್ಮಹತ್ಯೆ ಸದ್ದು ಮಾಡುತ್ತಿರುವ ನಡುವೆಯೇ, ಜೀವನಾಂಶದ ಮೊತ್ತವನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ 8 ಅಂಶಗಳನ್ನು ರೂಪಿಸಿದೆ,

ನವದೆಹಲಿ: ಜೀವನಾಂಶಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಟೆಕ್ಕಿ ಅತುಲ್‌ ಸುಭಾಷ್‌ ಆತ್ಮಹತ್ಯೆ ಸದ್ದು ಮಾಡುತ್ತಿರುವ ನಡುವೆಯೇ, ಜೀವನಾಂಶದ ಮೊತ್ತವನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ 8 ಅಂಶಗಳನ್ನು ರೂಪಿಸಿದೆ,

ಜೀವನಾಂಶದ ಮೊತ್ತವನ್ನು ಪತಿಗೆ ದಂಡ ವಿಧಿಸದ ರೀತಿಯಲ್ಲಿ ನಿರ್ಧರಿಸಬೇಕು. ಆದರೆ ಹೆಂಡತಿಗೆ ಯೋಗ್ಯವಾದ ಜೀವನ ಮಟ್ಟವನ್ನು ಖಾತ್ರಿಪಡಿಸಬೇಕು ಎಂದು ನ್ಯಾ। ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ. ವರಾಲೆ ಅವರಿರುವ ಪೀಠ ನ್ಯಾಯಾಲಯವು ಸಮತೋಲಿತ ಸೂತ್ರವನ್ನು ಸಿದ್ಧಪಡಿಸಿದೆ. ಗುಜರಾತ್‌ನ ವಿಚ್ಛೇದನ ಪ್ರಕರಣವೊಂದನ್ನು ಇತ್ಯರ್ಥಪಡಿಸುವಾಗ ಪೀಠ ಈ ಮಾರ್ಗೋಪಾಯ ನೀಡಿದೆ.

ಜೀವನಾಂಶದ ಹಣಕ್ಕಾಗಿ ಪತ್ನಿ ಹಾಗೂ ಅತ್ತೆ ಕಿರುಕುಳ ತಾಳದೇ ಬೆಂಗಳೂರು ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾದ ಎಂಬ ಆರೋಪ ಕೇಳಿಬಂದಾಗಲೇ ಈ ತೀರ್ಪು ಹೊರಬಂದಿದ್ದು ಮಹತ್ವ ಪಡೆದಿದೆ.

ಜೀವನಾಂಶವನ್ನು ನಿರ್ಧರಿಸುವಾಗ ಪರಿಗಣಿಸಬೇಕಾದ ಸುಪ್ರೀಂ ಕೋರ್ಟ್ ಪಟ್ಟಿ ಮಾಡಿದ ಎಂಟು ಅಂಶಗಳು ಇಲ್ಲಿವೆ.

8 ಅಂಶಗಳು:

- ಗಂಡನ ಆರ್ಥಿಕ ಸಾಮರ್ಥ್ಯ, ಅವನ ಆದಾಯ, ನಿರ್ವಹಣೆ ಜವಾಬ್ದಾರಿಗಳು ಮತ್ತು ಹೊಣೆಗಾರಿಕೆಗಳು.

- ಪತಿ ಹಾಗೂ ಪತ್ನಿಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ- ಭವಿಷ್ಯದಲ್ಲಿ ಹೆಂಡತಿ ಮತ್ತು ಅವಲಂಬಿತ ಮಕ್ಕಳ ಸಮಂಜಸವಾದ ಅಗತ್ಯತೆಗಳು- ಉಭಯ ಪಕ್ಷಗಾರರ ಶೈಕ್ಷಣಿಕ ಮತ್ತು ಉದ್ಯೋಗದ ಸ್ಥಿತಿಗಳು.

- ಆದಾಯದ ಮೂಲ ಅಥವಾ ಅರ್ಜಿದಾರರ ಒಡೆತನದ ಸ್ವತ್ತುಗಳು- ಮಾವನ ಮನೆಯಲ್ಲಿ ಇದ್ದಾಗ ಹೆಂಡತಿ ಅನುಭವಿಸಿದ್ದ ಜೀವನ ಮಟ್ಟ

- ಕುಟುಂಬದ ಜವಾಬ್ದಾರಿಗಳಿಗಾಗಿ ಪತ್ನಿ ಮಾಡಿದ ಯಾವುದೇ ಉದ್ಯೋಗ ತ್ಯಾಗ- ಯಾವುದೇ ಉದ್ಯೋಗದಲ್ಲಿಲ್ಲದ ಹೆಂಡತಿ ಮಾಡುವ ದಾವೆ ವೆಚ್ಚಗಳು