ಸಾರಾಂಶ
ಸಂದೇಶ್‌ಖಾಲಿಯಲ್ಲಿ ಭೂಕಬಳಿಕೆ ಮಾಡಿರುವ ಆರೋಪದ ಮೇಲೆ ಟಿಎಂಸಿ ಮುಖಂಡ ಅಮಿತ್ ಮೈತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲ್ಕತಾ: ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ಗ್ರಾಮಸ್ಥರ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ ಆರೋಪ ಹೊತ್ತಿರುವ ಟಿಎಂಸಿ ಮುಖಂಡ ಅಜಿತ್ ಮೈತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮೈತಿ, ತಲೆಮರೆಸಿಕೊಂಡಿರುವ ಟಿಎಂಸಿ ನಾಯಕ ಶೇಖ್ ಶಾಜಹಾನ್‌ನ ಆಪ್ತನಾಗಿದ್ದಾನೆ.ಈತನನ್ನು ಭಾನುವಾರ ಗ್ರಾಮಸ್ಥರೇ ಅಟ್ಟಾಡಿಸಿಕೊಂಡು ಬಂದಿದ್ದರು.
ಆಗ ಆತ ಮನೆಯೊಳಗೆ 2 ತಾಸು ತಾನೇ ಲಾಕ್ ಮಾಡಿಕೊಂಡು ಅವಿತುಕೊಂಡಿದ್ದ.ಸೋಮವಾರ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈತನ ಗುರು ಶೇಖ್ ಶಾಹಜಾನ್ ಮೇಳೆ 70 ಭೂಕಬಳಿಕೆ ಪ್ರಕರಣಗಳಿವೆ.