ಆಂಧ್ರಪ್ರದೇಶದಲ್ಲೂ ಜಾತಿಗಣತಿ ನಡೆಸಲು ಸಚಿವಸಂಪುಟ ಅನುಮೋದನೆ

| Published : Nov 04 2023, 12:31 AM IST

ಆಂಧ್ರಪ್ರದೇಶದಲ್ಲೂ ಜಾತಿಗಣತಿ ನಡೆಸಲು ಸಚಿವಸಂಪುಟ ಅನುಮೋದನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಗಣತಿ, ರಾಜ್ಯ ಸರ್ಕಾರದಿಂದಲೇ ಹೂಡಿಕೆ ಬೆಂಬಲ ಬೋರ್ಡ್‌ ಸೇರಿದಂತೆ ಹಲವು ನಿರ್ಧಾರಗಳಿಗೆ ಆಂಧ್ರಪ್ರದೇಶ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.
ಅಮರಾವತಿ: ಜಾತಿ ಗಣತಿ, ರಾಜ್ಯ ಸರ್ಕಾರದಿಂದಲೇ ಹೂಡಿಕೆ ಬೆಂಬಲ ಬೋರ್ಡ್‌ ಸೇರಿದಂತೆ ಹಲವು ನಿರ್ಧಾರಗಳಿಗೆ ಆಂಧ್ರಪ್ರದೇಶ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್‌ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸಲು ಸರ್ಕಾರದಿಂದಲೇ ಹೂಡಿಕೆ ಬೆಂಬಲ ಘಟಕ ಸ್ಥಾಪನೆ ಮಾಡಲು ಹಾಗೂ ಈ ಪ್ಯಾಕೇಜನ್ನು 2 ಆಹಾರ ಉತ್ಪಾದನಾ ಘಟಕ್ಕೆ ವರ್ಗಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ಜಾತಿ ಗಣತಿ, ಶಾಲೆಗಳಲ್ಲಿ ಕೌಶಲ್ಯ ತಜ್ಞರ ನೇಮಕ, ಪೋಲಾವರಂ ಯೋಜನೆಯಿಂದ ಭೂಮಿ ಕಳೆದುಕೊಂಡ 12,984 ಕುಟುಂಬಗಳಿಗೆ ಉಚಿತ ಭೂಮಿ ನೀಡಿಕೆ, ಹಿಂಗಾರು ಬೆಳೆಗೆ 5000 ಕೋಟಿ ರು. ಸಾಲ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ.