ಆಂಧ್ರಪ್ರದೇಶ : ಅಕ್ರಮ ಮದ್ಯ ನಾಶದ ವೇಳೆ ಪೊಲೀಸರ ಮುಂದೆಯೇ ಬಾಟಲಿ ದೋಚಿದ ಮದ್ಯಪ್ರಿಯರು!

| Published : Sep 11 2024, 01:02 AM IST / Updated: Sep 11 2024, 05:47 AM IST

ಸಾರಾಂಶ

ಗುಂಟೂರಿನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ನಾಶಪಡಿಸುವ ವೇಳೆ ಸ್ಥಳೀಯರು ಬಾಟಲಿಗಳನ್ನು ದೋಚಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ бездіяльністьಗೆ आलोचना ವ್ಯಕ್ತವಾಗಿದೆ.

ಗುಂಟೂರು: ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ನಾಶಪಡಿಸುತ್ತಿದ್ದ ವೇಳೆ ಪೊಲೀಸರ ಮುಂದೆಯೇ ಮದ್ಯಪ್ರಿಯರು ಮದ್ಯದ ಬಾಟಲಿಗಳನ್ನು ದೋಚಿದ ಪ್ರಸಂಗ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

ಇಲ್ಲಿನ ಎಟಕೂರು ರಸ್ತೆಯಲ್ಲಿ ಡಂಪಿಂಗ್‌ ಯಾರ್ಡ್‌ನಲ್ಲಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 50 ಲಕ್ಷ ರು. ಮೌಲ್ಯದ 24 ಸಾವಿರ ಮದ್ಯದ ಬಾಟಲಿಗಳನ್ನು ನಾಶ ಪಡಿಸಲು ಎಲ್ಲವನ್ನು ಸಾಲಾಗಿ ಜೋಡಿಸಿದ್ದರು.  

ಇನ್ನೇನು ಬಾಟಲಿಗಳನ್ನು ನಾಶ ಪಡಿಸಬೇಕು ಎನ್ನುವ ವೇಳೆಗೆ ಅಲ್ಲಿಯ ಸುತ್ತಮುತ್ತಲಿನ ಮದ್ಯಪ್ರಿಯರ ಗುಂಪು ಧಾವಿಸಿ ಬಾಟಲಿಗಳನ್ನು ದೋಚಲು ಶುರು ಮಾಡಿದ್ದಾರೆ. ಈ ಎಲ್ಲಾ ಘಟನೆ ಪೊಲೀಸರು ಮತ್ತು ಅಧಿಕಾರಿಗಳ ಮುಂದೇಯೇ ನಡೆದಿದೆ. ಆದರೂ ಪೊಲೀಸರು ಸುಮ್ಮನಿದ್ದರು. ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ.