ಸಾರಾಂಶ
ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷು ಚುನಾವಣೆಗೆ ಅರ್ಜಿಯನ್ನು ಆಹ್ವಾನಿಸಿದ್ದು, ಲೋಕಸಭೆಗೆ 25 ಸಾವಿರ ಮತ್ತು ವಿಧಾನಸಭೆಗೆ 15 ಸಾವಿರ ರು. ನಿಗದಿಪಡಿಸಿದೆ. ಮೀಸಲಾತಿ ಕ್ಷೇತ್ರಗಳಲ್ಲಿ ತುಸು ಕಡಿಮೆ ಮಾಡಲಾಗಿದೆ.
ಅಮರಾವತಿ: ಕರ್ನಾಟಕ ಮತ್ತು ತೆಲಂಗಾಣ ಮಾದರಿಯಲ್ಲೇ ಆಂಧ್ರಪ್ರದೇಶ ರಾಜ್ಯ ಕಾಂಗ್ರೆಸ್ ಘಟಕ ಕೂಡಾ ಲೋಕಸಭೆ ಮತ್ತು ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿಗೆ ಶುಲ್ಕ ವಸೂಲಿ ಮಾಡಲು ನಿರ್ಧರಿಸಿದೆ.
ಲೋಕಸಭಾ ಚುನಾವಣೆಯ ಅರ್ಜಿಗೆ 25000 ರು. ಮತ್ತು ವಿಧಾನಸಭಾ ಟಿಕೆಟ್ ಅರ್ಜಿಗೆ ರಾಜ್ಯ ಘಟಕೆ ತಲಾ 10000 ರು. ಶುಲ್ಕ ನಿಗದಿ ಮಾಡಿದೆ.ಮೀಸಲು ಕ್ಷೇತ್ರಗಳಿಗೆ ಮೊತ್ತ ಕ್ರಮವಾಗಿ 15000 ರು. ಮತ್ತು 5000 ರು. ಇರಲಿದೆ ಎಂದು ಆಂಧ್ರಪ್ರದೇಶ ಕಾಂಗ್ರೆಸ್ ಉಸ್ತುವಾರಿ ಮಾಣಿಕ್ಯಂ ಟಾಗೋರ್ ಎಂದು ಮಾಹಿತಿ ನೀಡಿದ್ದಾರೆ.