ಸಾರಾಂಶ
ಕೆಂಪುಕೋಟೆ ಸಮೀಪದ ಕಾರ್ ಬಾಂಬ್ ಸ್ಫೋಟಕ್ಕೆ ಆತ್ಮಾಹುತಿ ದಾಳಿಕೋರ ಡಾ। ಉಮರ್ ನಬಿ ಬಳಸಿದ್ದ ‘ಹ್ಯುಂಡೈ ಐ20’ ಕಾರು ಖರೀದಿಗೆ ಸಹಕರಿಸಿದ್ದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಇದು ಈ ಪ್ರಕರಣದ ಮೊದಲ ಬಂಧನವಾಗಿದೆ.
- ತನಿಖೆ ನಡೆಸಿದ ಎನ್‌ಐಎ ಮೊದಲ ಬೇಟೆ- ಈತ ಟೆರರ್ ಡಾಕ್ಟರ್ ಉಮರ್ ನಬಿ ಆಪ್ತ
13 ಜನರ ಬಲಿ ಪಡೆದ ದಿಲ್ಲಿ ಸ್ಫೋಟದ ಬಳಿಕ ತನಿಖಾ ಸಂಸ್ಥೆಗಳಿಂದ ಮೊದಲ ವ್ಯಕ್ತಿ ಸೆರೆಸ್ಫೋಟಕ್ಕೆ ಬಳಸಿದ ಕಾರು ಖರೀದಿಸಿ, ತನ್ನ ಹೆಸರಲ್ಲಿ ನೋಂದಣಿ ಮಾಡಿಸಿದ್ದ ಅಮೀರ್
ನವದೆಹಲಿ: ಕೆಂಪುಕೋಟೆ ಸಮೀಪದ ಕಾರ್ ಬಾಂಬ್ ಸ್ಫೋಟಕ್ಕೆ ಆತ್ಮಾಹುತಿ ದಾಳಿಕೋರ ಡಾ। ಉಮರ್ ನಬಿ ಬಳಸಿದ್ದ ‘ಹ್ಯುಂಡೈ ಐ20’ ಕಾರು ಖರೀದಿಗೆ ಸಹಕರಿಸಿದ್ದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಇದು ಈ ಪ್ರಕರಣದ ಮೊದಲ ಬಂಧನವಾಗಿದೆ.ಬಂಧಿತನ ಹೆಸರು ಅಮೀರ್ ರಷೀದ್ ಅಲಿ. ಈತ ಜಮ್ಮು ಕಾಶ್ಮೀರದ ಪಾಂಪೋರ್ ಬಳಿಯ ಸಂಬೂರ ಗ್ರಾಮದ ನಿವಾಸಿ.
‘ದಾಳಿಗೆ ಬಳಸಲಾದ ಕಾರು ಬಂಧಿತ ಅಲಿ ಹೆಸರಲ್ಲಿ ನೋಂದಣಿಯಾಗಿತ್ತು. ಆತ ಉಗ್ರರೊಂದಿಗೆ ದೆಹಲಿಗೆ ತೆರಳಿ ಕಾರು ಖರೀದಿಯಲ್ಲಿ ಸಹಕರಿಸಿದ್ದ. ದೆಹಲಿ ದಾಳಿಗಾಗಿ ಕಾರಿನಲ್ಲಿ ಸಾಗಿಸಬಹುದಾದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಇದೇ ಕಾರಿನಲ್ಲಿ ಇರಿಸಲಾಗಿತ್ತು’ ಎಂದೂ ಹೇಳಿದ್ದಾರೆ.ದಾಳಿಯಾದ ದಿನವೇ ಈತ, ಹೊಸ ಕಾರು ಖರೀದಿದಾರರಿಗೆ ಶೋರೂಂಗಳು ನೀಡುವ ‘ಬೃಹತ್ ಸಾಂಕೇತಿಕ ಕೀ’ ಹಿಡಿದು ಅದರ ಮುಂದೆ ನಿಂತ ಫೋಟೋ ವೈರಲ್ ಆಗಿತ್ತು.
ಇನ್ನೊಂದು ಕಾರು ವಶ:ಇದರೊಂದಿಗೆ ಅಧಿಕಾರಿಗಳು, ಆತ್ಮಾಹುತಿ ದಾಳಿಕೋರ ಡಾ। ಉಮರ್ ನಬಿಗೆ ಸೇರಿದ ಮತ್ತೊಂದು ಕಾರ್ ಅನ್ನು ಜಪ್ತಿ ಮಾಡಿದ್ದಾರೆ. ಅದರ ಪಡೆದು ಪರಿಶೀಲಿಸುತ್ತಿದ್ದಾರೆ.
;Resize=(128,128))
;Resize=(128,128))