ದಿಲ್ಲಿ ಸ್ಫೋಟ ರೂವಾರಿ ಡಾ.ನಬಿ ಪುಲ್ವಾಮ ಮನೆ ಪೂರ್ಣ ನೆಲಸಮ

| N/A | Published : Nov 15 2025, 03:00 AM IST

Dr Nabi
ದಿಲ್ಲಿ ಸ್ಫೋಟ ರೂವಾರಿ ಡಾ.ನಬಿ ಪುಲ್ವಾಮ ಮನೆ ಪೂರ್ಣ ನೆಲಸಮ
Share this Article
  • FB
  • TW
  • Linkdin
  • Email

ಸಾರಾಂಶ

ಕೆಂಪುಕೋಟೆ ಸಮೀಪ ಕಾರು ಸ್ಫೋಟಿಸಿ 13 ಜನರ ಸಾವಿಗೆ ಕಾರಣವಾದ ಕಿಲ್ಲರ್‌ ಡಾಕ್ಟರ್‌ ಉಮರ್‌ ನಬಿಯ ಕಾಶ್ಮೀರದ ಪುಲ್ವಾಮದಲ್ಲಿರುವ ಮನೆಯನ್ನು ಭದ್ರತಾ ಪಡೆ ಸಿಬ್ಬಂದಿ ರಾತ್ರೋರಾತ್ರಿ ನೆಲಸಮಗೊಳಿಸಿದ್ದಾರೆ.

ನವದೆಹಲಿ: ಕೆಂಪುಕೋಟೆ ಸಮೀಪ ಕಾರು ಸ್ಫೋಟಿಸಿ 13 ಜನರ ಸಾವಿಗೆ ಕಾರಣವಾದ ಕಿಲ್ಲರ್‌ ಡಾಕ್ಟರ್‌ ಉಮರ್‌ ನಬಿಯ ಕಾಶ್ಮೀರದ ಪುಲ್ವಾಮದಲ್ಲಿರುವ ಮನೆಯನ್ನು ಭದ್ರತಾ ಪಡೆ ಸಿಬ್ಬಂದಿ ರಾತ್ರೋರಾತ್ರಿ ನೆಲಸಮಗೊಳಿಸಿದ್ದಾರೆ. 

ಎರಡು ಅಂತಸ್ತಿನ ಮನೆಯನ್ನು ಧ್ವಂಸ

ಗುರುವಾರ ರಾತ್ರಿ ವೇಳೆ ಅಧಿಕಾರಿಗಳ ತಂಡ ಎರಡು ಅಂತಸ್ತಿನ ಮನೆಯನ್ನು ಧ್ವಂಸಗೊಳಿಸಿದೆ.

ಸ್ಫೋಟದ ಹಿಂದೆ ಡಾ.ನಬಿ ಕೈವಾಡ ದೃಢ

ಡಿಎನ್‌ಎ ಪರೀಕ್ಷೆಯಲ್ಲಿ, ಸ್ಫೋಟದ ಹಿಂದೆ ಡಾ.ನಬಿ ಕೈವಾಡ ದೃಢವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಹಿಂದೆ ಪಹಲ್ಗಾಂ ದಾಳಿಯಲ್ಲಿ ಕೈವಾಡವಿದ್ದವರ ಮನೆಯನ್ನೂ ಇದೇ ರೀತಿ ಧ್ವಂಸಗೊಳಿಸಲಾಗಿತ್ತು. ಇದೀಗ ಉಮರ್‌ ಮನೆಯನ್ನು ಕೆಡುವುದರ ಮೂಲಕ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವವರಿಗೆ ಕಠಿಣ ಸಂದೇಶವನ್ನು ಸರ್ಕಾರ ರವಾನಿಸಿದೆ.

Read more Articles on