ಸಾರಾಂಶ
ದೆಹಲಿಯಲ್ಲಿ ಬಿಜೆಪಿ ಗೆಲುವಿಗೆ ಮೋದಿ ವರ್ಚಸ್ಸಿನ ಜೊತೆಗೆ, ಬಿಜೆಪಿ ನಾಯಕರಾದ ರಾಜೀವ್ ಚಂದ್ರಶೇಖರ್ ಮತ್ತು ತರುಣ್ ಚುಗ್ ನಡೆಸಿದ 5 ಸಾವಿರ ಸಭೆಗಳು ಸಹಾಯವಾಯಿತು ಅಂತಲೇ ವಿಶ್ಲೇಷಿಸಲಾಗುತ್ತಿದೆ.
ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಗೆಲುವಿಗೆ ಮೋದಿ ವರ್ಚಸ್ಸಿನ ಜೊತೆಗೆ, ಬಿಜೆಪಿ ನಾಯಕರಾದ ರಾಜೀವ್ ಚಂದ್ರಶೇಖರ್ ಮತ್ತು ತರುಣ್ ಚುಗ್ ನಡೆಸಿದ 5 ಸಾವಿರ ಸಭೆಗಳು ಸಹಾಯವಾಯಿತು ಅಂತಲೇ ವಿಶ್ಲೇಷಿಸಲಾಗುತ್ತಿದೆ.
ಭಾಷೆ, ಪ್ರಾದೇಶಿಕತೆ ಮತ್ತು ಸಾಮಾಜಿಕ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ರಣತಂತ್ರ ಹೂಡಿದ್ದ ಬಿಜೆಪಿ ಅದನ್ನು ಕೇಂದ್ರೀಕರಿಸಿಯೇ ಪ್ರಚಾರದ ಗುಂಪನ್ನು ರಚಿಸಿತು. ದೊಡ್ಡ ದೊಡ್ಡ ನಾಯಕರ ಚುನಾವಣಾ ರ್‍ಯಾಲಿಗಳ ಜೊತೆಗೆ ಕಾರ್ಯಕರ್ತರನ್ನು ಹುರಿದುಂಬಿಸಲು ಸಣ್ಣಪುಟ್ಟ ಸಭೆಗಳನ್ನು ಕೂಡ ಆಯೋಜಿಸಿತ್ತು. ಅದರಲ್ಲಿಯೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ನೇತೃತ್ವದ ಬಿಜೆಪಿ ನಾಯಕರ ತಂಡವು ಮತದಾನಕ್ಕೂ ಮೊದಲು 7 ವಾರಗಳಲ್ಲಿ ಸುಮಾರು 5 ಸಾವಿರ ಸಣ್ಣ ಸಭೆಗಳನ್ನು ನಡೆಸಿತ್ತು. ಈ ಸಭೆಗಳ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಲು ಮತ್ತು ಪಕ್ಷದ ಪ್ರಣಾಳಿಕೆಯನ್ನು ಜನರಿಗೆ ತಲುಪವಲ್ಲಿ ಯಶಸ್ವಿಯಾಯಿತು,