ಸಾರಾಂಶ
ಮತದಾನ ಮುಗಿದು 48 ಗಂಟೆಯೊಳಗೆ ಚುನಾವಣಾ ಆಯೋಗವು ಒಟ್ಟು ಚಲಾವಣೆಯಾದ ಮತಗಳ ದತ್ತಾಂಶವನ್ನು ನಿಖರ ಅಂಕಿಗಳ ಸಮೇತ ಒದಗಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮೇ 17ರಂದು ವಿಚಾರಣೆ ನಡೆಸಲಿದೆ.
ನವದೆಹಲಿ: ಮತದಾನ ಮುಗಿದ 48 ಗಂಟೆಯೊಳಗೆ ಚುನಾವಣಾ ಆಯೋಗವು ಮತದಾನ ಪ್ರಮಾಣವನ್ನು ನಿಖರ ಅಂಕಿ ಸಂಖ್ಯೆಗಳೊಂದಿಗೆ ಪ್ರಕಟಿಸಬೇಕು ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಎನ್‌ಜಿಒ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಮೊದಲ ಹಂತದ ಮತದಾನ ಮುಗಿದ ಬಳಿಕ ಚುನಾವಣಾ ಆಯೋಗ ಪ್ರಕಟಿಸಿದ ಮತಪ್ರಮಾಣಕ್ಕೂ 11 ದಿನಗಳ ಬಳಿಕ ಪ್ರಕಟಿಸಿದ ಅಂತಿಮ ಮತಪ್ರಮಾಣಕ್ಕೂ ಶೇ.5-6ರಷ್ಟು ವ್ಯತ್ಯಾಸವಿದೆ. ಇದು ಚುನಾವಣಾ ವ್ಯವಸ್ಥೆಯಲ್ಲಿ ಜನತೆಗೆ ಅಪನಂಬಿಕೆ ಮೂಡುವಂತೆ ಮಾಡುತ್ತದೆ.
ಈ ಹಿನ್ನೆಲೆಯಲ್ಲಿ 48 ಗಂಟೆಯೊಳಗೆ ಅಂತಿಮ ಮತಪ್ರಮಾಣವನ್ನು ಬೂತ್ ಮಟ್ಟದಲ್ಲಿ ನಿಖರ ಅಂಕಿ ಸಂಖ್ಯೆಗಳೊಂದಿಗೆ ಪ್ರಕಟಿಸಬೇಕು ಎಂದು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಮೂಲಕ ಎಡಿಆರ್ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೇ 17ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.