ಸೋಮವಾರವಷ್ಟೇ ಕಾಂಗ್ರೆಸ್‌ ತೊರೆದಿದ್ದ ಮಾಜಿ ರಾಜ್ಯಾಧ್ಯಕ್ಷ ಅರ್ಜಿನ್‌ ಮೊದ್ವಾಡಿಯಾ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾದರು.

ಗಾಂಧಿನಗರ: ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ನ್ಯಾಯ ಯಾತ್ರೆ ರಾಜ್ಯವನ್ನು ಪ್ರವೇಶಿಸಲು ಇನ್ನು ಕೆಲವೇ ದಿನಗಳು ಉಳಿದಿರುವ ನಡುವೆಯೇ ಗುಜರಾತ್‌ನ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅರ್ಜುನ್‌ ಮೋಧ್ವಾಡಿಯಾ ಮಂಗಳವಾರ ಬಿಜೆಪಿ ಸೇರ್ಪಡೆಯಾದರು.

ಸೋಮವಾರವಷ್ಟೇ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ಯಕ್ಕೆ ರಾಜೀನಾಮೆ ನೀಡಿದರು.

ಅರ್ಜುನ್‌ ಜೊತೆಗೆ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಅಂಬರೀಶ್‌ ದೇರ್‌ ಕೂಡಾ ಬಿಜೆಪಿಗೆ ಸೇರ್ಪಡೆಯಾದರು.

ಇದರೊಂದಿಗೆ ಗುಜರಾತ್‌ನಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯೆ 14ಕ್ಕೆ ಕುಸಿದಿದೆ.