ಸಾರಾಂಶ
ಬಿಜೆಪಿ ವಿರುದ್ಧ ತಾನು ಮಾಡಿರುವ ರಿಟ್ವೀಟ್ ತಪ್ಪು ನಡೆಯಿಂದ ಕೂಡಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ನವದೆಹಲಿ: ಜರ್ಮನಿಯಲ್ಲಿರುವ ಭಾರತದ ಯೂಟ್ಯೂಬರ್ ಧ್ರುವ್ ರಾಠಿ ಸಿದ್ಧಪಡಿಸಿದ್ದ ‘ಬಿಜೆಪಿ ಐಟಿ ಸೆಲ್ ಪಾರ್ಟ್-2’ ಎಂಬ ವಿಡಿಯೋ ರೀಟ್ವೀಟ್ ಮಾಡಿ ತಪ್ಪು ಮಾಡಿದ್ದೇನೆ ಎಂದು ಆಪ್ ನಾಯಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಎದುರು ತಪ್ಪೊಪ್ಪಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಬಿಜೆಪಿ ಬಗ್ಗೆ ಸಾಕಷ್ಟು ಸುಳ್ಳು ಮಾಹಿತಿಗಳಿದ್ದವು. ಇದನ್ನು ರೀಟ್ವೀಟ್ ಮಾಡುವುದು ಕೂಡ ನಿಯಮಬಾಹಿರ ಆಗಿರುವುದರಿಂದ ಕೇಜ್ರಿವಾಲ್, ಮಾನಹಾನಿ ಎಸಗಿದ್ದಾರೆ ಎಂಬ ದೂರು ದಾಖಲಾಗಿತ್ತು.
ಇದರ ಬೆನ್ನಲ್ಲೇ ಕೋರ್ಟ್ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಕೇಜ್ರಿವಾಲ್ ವಿರುದ್ಧದ ಮಾನಹಾನಿ ದಾವೆ ಹಿಂಪಡೆಯುತ್ತೀರಾ ಎಂದು ಅರ್ಜಿದಾರರನ್ನು ಸುಪ್ರೀಂ ಕೋರ್ಟ್ ಕೇಳಿದೆ.