ಸಾರಾಂಶ
ದೆಹಲಿ ಅಬಕಾರಿ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಏಳನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫೆ.26ಕ್ಕೆ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ) ಏಳನೇ ಬಾರಿ ಸಮನ್ಸ್ ನೀಡಿದೆ.
ಫೆ.19ರಂದು ವಿಚಾರಣೆಗೆ ಗೈರಾದ ಕಾರಣ ಇದೀಗ ಮತ್ತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಇ.ಡಿ. ಹೇಳಿದೆ.
ಕೇಜ್ರಿವಾಲ್ 6 ಬಾರಿ ವಿಚಾರಣೆಗೆ ಗೈರಾಗಿದ್ದ ವಿರುದ್ಧ ಇ.ಡಿ. ಕೋರ್ಟ್ ಮೆಟ್ಟಿಲೇರಿದೆ.
ಈ ಅರ್ಜಿ ವಿಚಾರಣೆ ವೇಳೆ ಕೇಜ್ರಿ ಖುದ್ದು ಹಾಜರಿಗೆ ಕೋರ್ಟ್ ವಿನಾಯಿತಿ ನೀಡಿತ್ತಾದರೂ, ಅವರ ಪದೇ ಪದೇ ಗೈರಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ಆ ಅರ್ಜಿಯ ತೀರ್ಪು ಇನ್ನೂ ಹೊರಬರದ ಕಾರಣ ಅಲ್ಲಿಯವರೆಗೂ ತಾವು ವಿಚಾರಣೆಗೆ ಹೋಗುವುದಿಲ್ಲ ಎಂದು ಕೇಜ್ರಿ ಪಟ್ಟುಹಿಡಿದಿದ್ದಾರೆ.
;Resize=(128,128))
;Resize=(128,128))
;Resize=(128,128))