ಸಾರಾಂಶ
ಸೂಪರ್-4 ಹಂತವನ್ನು ಸೋಲಿನಿಂದ ಆರಂಭಿಸಿರುವ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಮಂಗಳವಾರ ಮುಖಾಮುಖಿಯಾಗಲಿದ್ದು, ಎರಡೂ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.
ಏಷ್ಯಾಕಪ್: ಸೋಲುವ ತಂಡಕ್ಕೆ ಫೈನಲ್ ಬಾಗಿಲು ಬಂದ್?ಅಬುಧಾಬಿ: ಸೂಪರ್-4 ಹಂತವನ್ನು ಸೋಲಿನಿಂದ ಆರಂಭಿಸಿರುವ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಮಂಗಳವಾರ ಮುಖಾಮುಖಿಯಾಗಲಿದ್ದು, ಎರಡೂ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.
ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಲಂಕಾ ಸೋಲುಂಡರೆ, ಪಾಕಿಸ್ತಾನಕ್ಕೆ ಭಾರತ ಶರಣಾಗಿತ್ತು. ಹೀಗಾಗಿ, ಫೈನಲ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಸೋಲುವ ತಂಡದ ಫೈನಲ್ ಬಾಗಿಲು ಬಹುತೇಕ ಬಂದ್ ಆಗಲಿದೆ.
ಎರಡೂ ತಂಡಗಳು ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದು ತುರ್ತಾಗಿ ಪರಿಹಾರ ಕಂಡುಕೊಳ್ಳಬೇಕಿದೆ.
ಪಂದ್ಯ ಆರಂಭ: ರಾತ್ರಿ 8ಕ್ಕೆ