ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ।ಅಸೀಂ ಮುನೀರ್‌ಗೆ ಪ್ರತಿಭಟನೆ ಬಿಸಿ ಎದುರಾಗಿದ್ದು, ಅಮೆರಿಕದಲ್ಲಿರುವ ಪಾಕಿಸ್ತಾನಿ ಪ್ರಜೆಗಳು, ‘ಆಸಿಮ್ ಮುನೀರ್ ಹೇಡಿ, ಸಾಮೂಹಿಕ ಕೊಲೆಗಾರ’ ಎಂದು ಟೀಕಿಸಿ ಪ್ರತಿಭಟಿಸಿದ ಘಟನೆ ನಡೆದಿದೆ.

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ।ಅಸೀಂ ಮುನೀರ್‌ಗೆ ಪ್ರತಿಭಟನೆ ಬಿಸಿ ಎದುರಾಗಿದ್ದು, ಅಮೆರಿಕದಲ್ಲಿರುವ ಪಾಕಿಸ್ತಾನಿ ಪ್ರಜೆಗಳು, ‘ಆಸಿಮ್ ಮುನೀರ್ ಹೇಡಿ, ಸಾಮೂಹಿಕ ಕೊಲೆಗಾರ’ ಎಂದು ಟೀಕಿಸಿ ಪ್ರತಿಭಟಿಸಿದ ಘಟನೆ ನಡೆದಿದೆ.

 ವಾಷಿಂಗ್ಟನ್‌ನಲ್ಲಿ ಜ. ಮುನೀರ್‌ ತಂಗಿದ್ದ ಕಟ್ಟಡದ ಬಳಿ ಜಮಾಯಿಸಿದ ಪಾಕಿಸ್ತಾನಿ ಪ್ರಜೆಗಳು ಸೇನಾ ಮುಖ್ಯಸ್ಥನ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅವರು ಹೊರಬರುತ್ತಿದ್ದಂತೆ ‘ಅಸೀಮ್ ಮುನೀರ್‌ ನೀನು ಹೇಡಿ, ನಿನಗೆ ನಾಚಿಕೆಯಾಗಬೇಕು, ಸಾಮೂಹಿಕ ಕೊಲೆಗಾರ, ಸರ್ವಾಧಿಕಾರಿ, ಪಾಕಿಸ್ತಾನಿಗಳ ಹಂತಕ’ ಎಂದು ಘೋಷಣೆ ಕೂಗಿದ್ದಾರೆ. ಪಾಕಿಸ್ತಾನ ಪ್ರಜೆಗಳು ಘೋಷಣೆ ಕೂಗುತ್ತಿರುವ ವಿಡಿಯೋ ವೈರಲ್ ಆಗಿದೆ.

ಪಾಕಿಸ್ತಾನದ ತೆಹ್ರೀಕ್- ಇ- ಇನ್ಸಾಫ್‌ ಬೆಂಬಲಿಗರು ಈ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ. ಅಮೆರಿಕದಲ್ಲಿ ತಮ್ಮ ದೇಶದವರಿಂದಲೇ ಎದುರಾದ ಈ ಅನಿರೀಕ್ಷಿತ ಆಕ್ರೋಶಕ್ಕೆ ಜ. ಮುನೀರ್‌ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.