ಅಸ್ಸಾಂ ಪ್ರವಾಹ: 30 ಜಿಲ್ಲೆಯ 24 ಲಕ್ಷ ಜನ ಬಾಧಿತ

| Published : Jul 07 2024, 01:24 AM IST / Updated: Jul 07 2024, 05:41 AM IST

ಅಸ್ಸಾಂ ಪ್ರವಾಹ: 30 ಜಿಲ್ಲೆಯ 24 ಲಕ್ಷ ಜನ ಬಾಧಿತ
Share this Article
  • FB
  • TW
  • Linkdin
  • Email

ಸಾರಾಂಶ

ಅಸ್ಸಾಂನ ಸುರಿಯುತ್ತಿರುವ ವಿಪರೀತ ಮಳೆಗೆ ಪ್ರವಾಹ ಸ್ಥಿತಿ ಗಂಭೀರವಾಗಿದೆ. ಬ್ರಹ್ಮಪುತ್ರಾ ನದಿ ಉಕ್ಕೇರಿರುವ ಕಾರಣ 30 ಜಿಲ್ಲೆಯ 24.5 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ತತ್ತರಿಸಿ ಹೋಗಿದ್ದಾರೆ

ಗುವಾಹಟಿ: ಅಸ್ಸಾಂನ ಸುರಿಯುತ್ತಿರುವ ವಿಪರೀತ ಮಳೆಗೆ ಪ್ರವಾಹ ಸ್ಥಿತಿ ಗಂಭೀರವಾಗಿದೆ. ಬ್ರಹ್ಮಪುತ್ರಾ ನದಿ ಉಕ್ಕೇರಿರುವ ಕಾರಣ 30 ಜಿಲ್ಲೆಯ 24.5 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ತತ್ತರಿಸಿ ಹೋಗಿದ್ದಾರೆ. ರಾಜ್ಯದ ಇನ್ನೂ ಅನೇಕ ಪ್ರಮುಖ ನದಿಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.

ಶುಕ್ರವಾರ ತಡರಾತ್ರಿ ದಿಬ್ರುಗಢ ಜಿಲ್ಲೆಯ ಪ್ರವಾಹ ಪರಿಸ್ಥಿಯನ್ನು ಅವಲೋಕಸಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಪ್ರವಾಹ ಪೀಡಿತ ಜನರೊಂದಿಗೆ ಸಂವಾದ ನಡೆಸಿದರು. ಒಟ್ಟು 47,103 ಸಂತ್ರಸ್ತರು 612 ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಹಾಗೂ 4,18,614 ಮಂದಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂಬ ಮಾಹಿತಿ ನೀಡಿದರು.

ಈ ವರ್ಷದಲ್ಲಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿರುವವರ ಸಂಖ್ಯೆ 52ಕ್ಕೇರಿದೆ. ಭೂಕುಸಿತ ಮತ್ತು ಚಂಡಮಾರುತದಿಂದ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.