ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆ ಬುಧವಾರ ಮುಕ್ತಾಯಗೊಂಡಿದ್ದು, ಕ್ರಮವಾಗಿ ಶೇ.58 ಹಾಗೂ ಶೇ.68 ಮತದಾನವಾಗಿದೆ. ಇದೇ ವೇಳೆ, 4 ರಾಜ್ಯಗಳ 15 ವಿಧಾನಸಭೆ ಚುನಾವಣೆಯೂ ಪಾಲ್ಗೊಂಡಿದ್ದು ಒಟ್ಟಾರೆ ಶೇ.50ಕ್ಕೂ ಹೆಚ್ಚು ಮತದಾನವಾಗಿದೆ.

 ಮುಂಬೈ/ರಾಂಚಿ : ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆ ಬುಧವಾರ ಮುಕ್ತಾಯಗೊಂಡಿದ್ದು, ಕ್ರಮವಾಗಿ ಶೇ.58 ಹಾಗೂ ಶೇ.68 ಮತದಾನವಾಗಿದೆ. ಇದೇ ವೇಳೆ, 4 ರಾಜ್ಯಗಳ 15 ವಿಧಾನಸಭೆ ಚುನಾವಣೆಯೂ ಪಾಲ್ಗೊಂಡಿದ್ದು ಒಟ್ಟಾರೆ ಶೇ.50ಕ್ಕೂ ಹೆಚ್ಚು ಮತದಾನವಾಗಿದೆ.

ಎಲ್ಲ ರಾಜ್ಯಗಳಲ್ಲಿ ನ.23ರಂದು ಮತ ಎಣಿಕೆ ನಡೆಯಲಿದೆ. ಈ ಮುನ್ನ ನ.13ರಂದು ನಡೆದ ವಯನಾಡ್‌ ಹಾಗೂ ಇತರ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಕೂಡ ಅಂದೇ ಪ್ರಕಟವಾಗಿದೆ.

ಜಾರ್ಖಂಡ್‌ನಲ್ಲಿ ತುರುಸಿನ ಮತದಾನ ನಡೆದರೆ, ಮಹಾರಾಷ್ಟ್ರದ ನಗರ ಭಾಗಗಳಲ್ಲಿ ಮತದಾನ ಕ್ಷೀಣವಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಉತ್ಸಾಹದಿಂದ ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಮಹಾರಾಷ್ಟ್ರದಲ್ಲಿ ಮಹಾಯುತಿ ಹಾಗೂ ಮಹಾ ವಿಕಾಸ ಅಘಾಡಿ ಕೂಟಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್-ಜೆಎಂಎಂ ಕೂಟ ಹಾಗೂ ಬಿಜೆಪಿ ನಡುವೆ ಹಣಾಹಣಿ ಇದೆ.

ಬಾಲಿವುಡ್‌ ತಾರೆಯರು, ಗಣ್ಯರ ಮತ:

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಂದು ಬಾಲಿವುಡ್‌ ತಾರೆಯರು ಹಾಗೂ ಗಣ್ಯರು ತಮ್ಮ ಹಕ್ಕು ಚಲಾಯಿಸುವ ಮೂಲಕ ಜನರಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಿದರು.

ನಟ ಸಲ್ಮಾನ್‌ ಖಾನ್‌, ಅಕ್ಷಯ್‌ ಕುಮಾರ್‌, ರಣಬೀರ್‌ ಕಪೂರ್‌, ರಾಜ್‌ಕುಮಾರ್‌ ರಾವ್‌, ಫರ್ಹಾನ್‌ ಅಖ್ತರ್‌, ಝೋಯಾ ಅಖ್ತರ್‌, ಹಿರಿಯ ನಟಿ ಶುಭಾ ಖೋಟೆ, ಸಾಹಿತಿ ಗುಲ್ಜಾರ್‌, ನಟಿ ಕರೀನಾ ಕಪೂರ್‌, ನಟ ಸೈಫ್‌ ಅಲಿ ಖಾನ್‌, ಶ್ರದ್ಧಾ ಕಪೂರ್‌, ನಟಿ ಮಾಧುರಿ ದೀಕ್ಷಿತ್‌, ಗೋವಿಂದ, ಜಾನ್ ಅಬ್ರಹಾಂ, ಅನನ್ಯಾ ಪಾಂಡೆ, ಅರ್ಜುನ್‌ ಕಪೂರ್‌, ಸೊನಾಲಿ ಬೇಂದ್ರೆ, ಸುರೇಶ್‌ ಓಬೆರಾಯ್‌, ಅನುಪಮ್‌ ಖೇರ್‌, ರಿತೇಶ್‌ ದೇಶ್‌ಮುಖ್‌, ಜೆನಿಲಿಯಾ, ಸೋನು ಸೂದ್‌, ಸುನಿಲ್‌ ಶೆಟ್ಟಿ, ಸುಭಾಶ್‌ ಘಾಯ್‌, ಖ್ಯಾತ ಗಾಯಕ ಕೈಲಾಶ್‌ ಖೇರ್‌ ಮುಂತಾದವರು ಮತದಾನ ಮಾಡಿದರು.

ಗಣ್ಯರು ಹಾಗೂ ಉದ್ಯಮಿಗಳಲ್ಲಿ ಮುಕೇಶ್‌ ಅಂಬಾನಿ, ಆನಂದ ಮಹೀಂದ್ರಾ.. ಮೊದಲಾದವರಿದ್ದರು.