ಮೋದಿ ಆಡಳಿತಕ್ಕೆ ಆಸಿಸ್‌ ಮಾಜಿ ಪಿಎಂ ಟರ್ನ್‌ಬುಲ್‌ ಫುಲ್‌ ಮಾರ್ಕ್ಸ್‌

| Published : Feb 04 2024, 01:31 AM IST / Updated: Feb 04 2024, 11:51 AM IST

ಮೋದಿ ಆಡಳಿತಕ್ಕೆ ಆಸಿಸ್‌ ಮಾಜಿ ಪಿಎಂ ಟರ್ನ್‌ಬುಲ್‌ ಫುಲ್‌ ಮಾರ್ಕ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಗೆ ಹತ್ತಕ್ಕೆ ಹತ್ತು ಸಂಪೂರ್ಣ ಅಂಕಗಳನ್ನು ಕೊಡುವುದಾಗಿ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಮಾಲ್ಕಮ್‌ ಟರ್ನ್‌ಬುಲ್‌ ಹೇಳಿದ್ದಾರೆ.

ಜೈಪುರ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಗೆ ಹತ್ತಕ್ಕೆ ಹತ್ತು ಸಂಪೂರ್ಣ ಅಂಕಗಳನ್ನು ಕೊಡುವುದಾಗಿ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಮಾಲ್ಕಮ್‌ ಟರ್ನ್‌ಬುಲ್‌ ಹೇಳಿದ್ದಾರೆ.

ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು, ‘ಭಾರತದ ಪ್ರಧಾನಿ ಮೋದಿ ಒಬ್ಬ ಸ್ಫೂರ್ತಿಯುತ ನಾಯಕನಾಗಿದ್ದು, ಆಡಳಿತದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತಿದ್ದಾರೆ. 

ಅವರ ಕಾರ್ಯವೈಖರಿಗೆ ನಾನು ಹತ್ತಕ್ಕೆ ಹತ್ತು ಸಂಪೂರ್ಣ ಅಂಕಗಳನ್ನು ಕೊಡಬಯಸುತ್ತೇನೆ. ಅವರು ಭಾರತದೊಳಗೆ ವಿವಾದಾತ್ಮಕ ನಡೆ ಅನುಸರಿಸಿರಬಹುದು. ಆದರೆ ಜಾಗತಿಕವಾಗಿ ಅವರೊಬ್ಬ ಕ್ರಾಂತಿಕಾರಿ ನಾಯಕ’ ಎಂದು ತಿಳಿಸಿದರು. 

ಭಾರತದ ಮೆಲುಕು: ಪ್ರಧಾನಿಯಾಗಿದ್ದ ವೇಳೆ 2017ರಲ್ಲಿ ಭಾರತದ ಪ್ರವಾಸ ಮಾಡಿದ್ದನ್ನು ಮೆಲುಕು ಹಾಕಿದ ಟರ್ನ್‌ಬುಲ್‌, ‘2017ರಲ್ಲಿ ನಾನು ಭಾರತಕ್ಕೆ ಬಂದಿದ್ದು, ನನ್ನ ಅವಿಸ್ಮರಣೀಯ ಕ್ಷಣ. 

ಈ ವೇಳೆ ಮೋದಿಯವರೊಂದಿಗೆ ಹಲವು ದ್ವಿಪಕ್ಷೀಯ ಒಪ್ಪಂದ ಮಾತುಕತೆ ನಡೆಸುವ ವೇಳೆ ತುಸು ಕಷ್ಟವಾಯಿತು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದು ತುಸು ತ್ರಾಸದಾಯಕ’ ಎಂದು ಉದ್ಯಮಿಯೂ ಆಗಿರುವ ಟರ್ನ್‌ಬುಲ್‌ ತಿಳಿಸಿದರು.