134 ಎಸೆತಗಳಲ್ಲಿ 327 ರನ್‌: ವೈಭವ್‌ರ ಸ್ನೇಹಿತ ಅಯನ್‌!

| N/A | Published : Jun 17 2025, 11:53 PM IST / Updated: Jun 18 2025, 06:34 AM IST

ಸಾರಾಂಶ

 ಬಿಹಾರದ ಮುಜಫರ್‌ಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯವೊಂದರಲ್ಲಿ ಅಯನ್‌ ರಾಜ್ ಎನ್ನುವ 13 ವರ್ಷದ ಬಾಲಕ 134 ಎಸೆತಗಳಲ್ಲಿ ಔಟಾಗದೇ ಬರೋಬ್ಬರಿ 327 ರನ್‌ ಬಾರಿಸಿ ದಾಖಲೆ ಬರೆದಿದ್ದಾರೆ.

ಪಾಟ್ನಾ: ಬಿಹಾರದ ಮುಜಫರ್‌ಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯವೊಂದರಲ್ಲಿ ಅಯನ್‌ ರಾಜ್ ಎನ್ನುವ 13 ವರ್ಷದ ಬಾಲಕ 134 ಎಸೆತಗಳಲ್ಲಿ ಔಟಾಗದೇ ಬರೋಬ್ಬರಿ 327 ರನ್‌ ಬಾರಿಸಿ ದಾಖಲೆ ಬರೆದಿದ್ದಾರೆ.

 ಅಯನ್ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಶತಕ ಸಿಡಿಸಿ ಮಿಂಚಿದ್ದ 14ರ ಬಾಲಕ ವೈಭವ್‌ ಸೂರ್ಯವಂಶಿ ಅವರ ಸ್ನೇಹಿತ ಎನ್ನುವುದು ವಿಶೇಷ. ಸಂಸ್ಕೃತಿ ಅಕಾಡೆಮಿ ಎನ್ನುವ ತಂಡವನ್ನು ಪ್ರತಿನಿಧಿಸಿದ ಅಯನ್‌, 30 ಓವರ್‌ಗಳ ಪಂದ್ಯದಲ್ಲಿ 41 ಬೌಂಡರಿ, 22 ಸಿಕ್ಸರ್‌ಗಳ ಸಹಿತ 327 ರನ್‌ ಪೇರಿಸಿದ್ದಾರೆ. ವಿಶೇಷವೆಂದರೆ ಬೌಂಡರಿ, ಸಿಕ್ಸರ್‌ಗಳಿಂದಲೇ 296 ರನ್‌ ಕಲೆ ಹಾಕಿದ್ದಾರೆ.

Read more Articles on