ರಸ್ತೆ ದಾಟ್ಟುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿಸಿ ಪರಾರಿಯಾಗುತ್ತಿದ್ದ ಲಾರಿ ಚಾಲಕನನ್ನು ಪೊಲೀಸರು ಚೇಸ್‌ ಮಾಡಿ ಎರಡೇ ಗಂಟೆಯಲ್ಲೇ ಬಂಧಿಸಿರುವ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೆಳಗಾವಿ: ರಸ್ತೆ ದಾಟ್ಟುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿಸಿ ಪರಾರಿಯಾಗುತ್ತಿದ್ದ ಲಾರಿ ಚಾಲಕನನ್ನು ಪೊಲೀಸರು ಚೇಸ್‌ ಮಾಡಿ ಎರಡೇ ಗಂಟೆಯಲ್ಲೇ ಬಂಧಿಸಿರುವ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

 ಕಿತ್ತೂರು ತಾಲೂಕಿನ ಉಮೇಶ ದೇಸೂರಕರ್ (30) ರಸ್ತೆ ಅಪಘಾತದಲ್ಲಿ ಮೃತ ವ್ಯಕ್ತಿ. ಲಾರಿ ಚಾಲಕ ಹಮ್ಮಿದಖಾನ್ ಬಂಧಿತ ಆರೋಪಿ. ಚಾಲಕ ಪಾದಚಾರಿ ವ್ಯಕ್ತಿ ಮೇಲೆ ಲಾರಿ ಹರಿಸಿ ವಾಹನ ನಿಲ್ಲಿಸದೇ ಪರಾರಿಯಾಗಿದ್ದ. ಪೊಲೀಸರು ಎರಡೇ ಗಂಟೆಯಲ್ಲೇ ಚೇಸ್‌ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಹಿರೇಬಾಗೆವಾಡಿ ಪೊಲೀಸರ ಕಾರ್ಯಾಚರಣೆಗೆ ಕಮಿಷನರ್‌ ಭೂಷಣ ಬೋರಸೆ ಅಭಿನಂದನೆ ಸಲ್ಲಿಸಿದ್ದಾರೆ.