ಕನ್ನಡಪ್ರಭ ವಾರ್ತೆ ಅಥಣಿ ರಾಷ್ಟ್ರ ರಕ್ಷಣೆಗಾಗಿ ಹಿಂದೂಗಳೆಲ್ಲ ಒಂದಾಗಿ ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು. ವಿಶ್ವ ಮಾನ್ಯತೆ ಹೊಂದಿರುವ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಯೊಬ್ಬರೂ ಪಾಲಿಸಲು ಜನಜಾಗೃತಿ ಮೂಡಿಸುವುದು ಅಗತ್ಯ ಎಂದು ಅಯೋಧ್ಯ ರಾಮ ಮಂದಿರ ಉಸ್ತುವಾರಿ ಗೋಪಾಲಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ರಾಷ್ಟ್ರ ರಕ್ಷಣೆಗಾಗಿ ಹಿಂದೂಗಳೆಲ್ಲ ಒಂದಾಗಿ ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು. ವಿಶ್ವ ಮಾನ್ಯತೆ ಹೊಂದಿರುವ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಯೊಬ್ಬರೂ ಪಾಲಿಸಲು ಜನಜಾಗೃತಿ ಮೂಡಿಸುವುದು ಅಗತ್ಯ ಎಂದು ಅಯೋಧ್ಯ ರಾಮ ಮಂದಿರ ಉಸ್ತುವಾರಿ ಗೋಪಾಲಜಿ ಹೇಳಿದರು.ಪಟ್ಟಣದಲ್ಲಿ ನಡೆದ ವಿರಾಟ್ ಹಿಂದೂ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಭಾರತವನ್ನು ಪ್ರೀತಿಸುವ, ದೇವನೊಬ್ಬ ನಾಮ ಹಲವು ಎನ್ನವವರು ನಿಜವಾದ ಹಿಂದೂಗಳು. ಹಿಂದೂಗಳು ಹೇಡಿಗಳಲ್ಲ, ಹಿಂದೂ ಸಮಾಜದ ಮೇಲೆ ದಾಳಿ ಮಾಡಿದರೆ ಅವರಿಗೆ ಸರಿಯಾದ ಉತ್ತರ ಕೊಡುವಷ್ಟು ಗಟ್ಟಿಯಾಗಿ ಬದುಕುತ್ತಿದ್ದಾರೆ. ರಾಮ ಮಂದಿರ ಒಡೆದರೆ ಹಿಂದೂಗಳು ಹೇಗೆ ಸಂಘಟಿತರಾಗುತ್ತಾರೆ ಎಂಬ ಮನೋಭಾವದ ಜನರು ರಾಮ ಮಂದಿರದಿಂದಲೇ ಹಿಂದೂ ಧರ್ಮ ಸಂಘಟಿತವಾಯಿತು ಎಂಬುದನ್ನು ಮರೆಯಬಾರದು ಎಂದರು.ಭಾರತ ಸಮೃದ್ದ, ಸುಸಂಸ್ಕೃತ ವಾಗಬೇಕಿದೆ, ಮಕ್ಕಳಿಗೆ ಪರಿಶ್ರಮ ಪಡುವುದನ್ನು ಕಲಿಸಿಕೊಡಿ, ನಮ್ಮ ಭೂಮಿಯನ್ನು ಫಲವತ್ತತೆ ಹೆಚ್ಚು ಮಾಡುವ ಕೆಲಸ ಮಾಡಬೇಕು. ರಾಸಾಯನಿಕ ಗೊಬ್ಬರ, ಅತಿಯಾದ ಕೀಟನಾಶಕಗಳ ಬಳಕೆಯಿoದ ಭೂತಾಯಿಗೆ ವಿಷ ಉಣಿಸುತಿದ್ದೇವೆ. ಅದಕ್ಕಾಗಿ ನಾವು ಸಾವಯವ ಗೊಬ್ಬರವನ್ನು ಉಪಯೋಗಿಸುವ ಮೂಲಕ ಭೂಮಿಯನ್ನು ಉಳಿಸಬೇಕು. ಸದೃಢ ಮತ್ತು ಆರೋಗ್ಯವಂತ ಭಾರತವನ್ನು ಕಟ್ಟಲು ಪ್ರತಿಯೊಬ್ಬರು ಮುಂದಾಗಬೇಕು. ಅದಕ್ಕಾಗಿ ನಾವೆಲ್ಲರೂ ಐಕ್ಯತೆಯಿಂದ ರಾಷ್ಟ್ರ ಕಟ್ಟಲು ಮುಂದಾಗಬೇಕು. ನಮ್ಮ ಭಾರತ ಸಮೃದ್ಧ ಮತ್ತು ಸದೃಢವಾಗಬೇಕಾದರೆ ಸ್ವಾಭಿಮಾನ ಭಾರತ ಕಟ್ಟಬೇಕು. ಸ್ವದೇಶಿ ವಸ್ತುಗಳನ್ನ ಬಳಸುವ ಮೂಲಕ ಸ್ವಾಭಿಮಾನದಿಂದ ನಮ್ಮ ಸಂಸ್ಕೃತಿಯನ್ನು ಪಾಲಿಸೋಣ ಎಂದು ಕರೆ ನೀಡಿದರು. ಬಿಳ್ಳೂರು ವಿರಕ್ತ ಮಠದ ಗುರುಚನ್ನಬಸವ ಸ್ವಾಮೀಜಿ ಮಾತನಾಡಿ, ಹಿಂದುಸ್ತಾನದಲ್ಲಿ ಹುಟ್ಟಿರುವದು ನಮ್ಮ ಪುಣ್ಯ. ಹಿಂದೂಸ್ತಾನದಲ್ಲಿ ಮಾತ್ರ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ನಾವು ಹಿಂದೂಗಳಾಗಿ ಹುಟ್ಟಿರುವದಕ್ಕಾಗಿ, ಭಾರತದಲ್ಲಿ ಸಾಕಷ್ಟು ಜ್ಞಾನವಿದೆ. ಅದಕ್ಕಾಗಿ ಇಡೀ ವಿಶ್ವವೆ ಭಾರತವನ್ನ ಕೊಂಡಾಡುತ್ತದೆ. ಪ್ರತಿ ಧರ್ಮಕ್ಕೂ ಒಂದು ಸಿದ್ದಾಂತವಿದೆ. ಅದರಂತೆ ಭಾರತಕ್ಕೆ ಜ್ಞಾನವೇ ಮುಖ್ಯವಾಗಿದೆ. ನಮ್ಮ ಹಿರಿಯರಂತೆ ನಾವು ಸಹ ಪರಂಪರೆಯನ್ನ ಉಳಿಸಿಕೊಂಡು ಹೋಗುವ ಕೆಲಸವಾಗಬೇಕು. ಭಾರತೀಯರು ಜ್ಞಾನದಿಂದ ಸಂಪನ್ನರು ಎಂಬುದನ್ನು ಅರಿತು ದೇಶದಲ್ಲಿರುವ ಲಕ್ಷಾಂತರ ಗುಲಕುಲಗಳನ್ನು ಬ್ರಿಟಿಷ್ ಆಡಳಿತ ಮುಚ್ಚಿ ಹಾಕಿದೆ. ತಮ್ಮದೇ ಆದ ಶಿಕ್ಷಣ ನೀತಿಯನ್ನ ದೇಶದಲ್ಲಿ ಜಾರಿಗೆ ತರುವ ಮೂಲಕ ಇಂದು ಇಂಗ್ಲೀಷ್ ವ್ಯಾಮೋಹ ಅಧಿಕವಾಗುತ್ತಿದೆ. ನಮ್ಮ ಭಾಷೆ ನಮ್ಮ ಸಂಸ್ಕೃತಿಯನ್ನನು ಯುವ ಜನಾಂಗ ಮರೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.ನಿಡಸೋಸಿ ಸಿದ್ದ ಸಂಸ್ಥಾನ ಪಠದ ನಿಜಲಿಂಗೇಶ್ವರ ಸ್ವಾಮೀಜಿ. ಶೆಟ್ಟರಮಠದ ಮರಳುಸಿದ್ದ ಮಹಾಸ್ವಮೀಜಿ ಮಾತನಾಡಿದರು. ವಿರಾಟ ಹಿಂದೂ ಸಂಚಾಲನಾ ಸಮೀತಿ ಅಧ್ಯಕ್ಷ ಎ.ಎ.ಹುದ್ದಾರ ಸ್ವಾಗತಿಸಿ, ಪರಿಚಯಿಸಿದರು. ವಿರಾಟ ಹಿಂದೂ ಸಮ್ಮೇಳನದ ಉಪಾಧ್ಯಕ್ಷ ಡಾ.ಮಹೇಶ ಕಾಪಸೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಅರವಿಂದರಾವ ದೇಶಪಾಂಡೆ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮುಖಂಡರಾದ ಸಿದ್ದಪ್ಪ ಮುದಕ್ಕಣ್ಣವರ, ಅಪ್ಪಾಸಾಬ ಅವತಾಡೆ, ಧರೇಪ್ಪಾ ಠಕ್ಕಣ್ಣವರ, ಶಾರದಾ ಹನಮಗೌಡರ, ನಾನಾಸಾಬ ಅವತಾಡೆ, ಗಿರೀಶ ಬುಟಾಳಿ, ಸಂಪತ್ತಕುಮಾರ ಶೆಟ್ಟಿ, ರವಿ ಪೂಜಾರಿ, ಡಾ.ವಿನಾಯಕ ಚಿಂಚೋಳ್ಳಿಮಠ, ವಿರಯ್ಯಾ ಕಾಡದೇವರಮಠ, ಪ್ರಭಾಕರ ಚವ್ಹಾಣ, ದತ್ತಾ ವಾಸ್ಟರ, ರಾಜು ಗುಡೊಡಗಿ, ವಿರೇಂದ್ರ ಕಾಗವಾಡೆ, ಹರೀಶ ಆಚಾರ್ಯ, ಪ್ರಶಾಂತ ತೋಡಕರ, ಭರತ ಸೋಮಯ್ಯ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.