ಸಾರಾಂಶ
ಅಯೋಧ್ಯೆಗೆ ಆಗಮಿಸುವ ಭಕ್ತಾದಿಗಳಿಗೆ ವಾಹನ ನಿಲ್ಲಿಸಲು ಅನುಕೂಲವಾಗುವಂತೆ ನಗರದ 51 ಸ್ಥಳಗಳಲ್ಲಿ ಸ್ಥಳ ನಿಗದಿಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಯೋಧ್ಯೆ: ಪ್ರಾಣಪ್ರತಿಷ್ಠಾಪನೆ ಅಂಗವಾಗಿ ನಗರಕ್ಕೆ ಬರುವ ಅತಿಥಿಗಳಿಗೆ ವಾಹನ ನಿಲ್ಲಿಸಲು 51 ಸ್ಥಳಗಳಲ್ಲಿ ಒಟ್ಟು 22,825 ವಾಹನಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ ನಿಲ್ದಾಣಗಳನ್ನು ಸುಲಭವಾಗಿ ಪತ್ತೆಹಚ್ಚಲು ಅವುಗಳನ್ನು ಗೂಗಲ್ ಮ್ಯಾಪ್‌ನಲ್ಲೂ ಅಳವಡಿಕೆ ಮಾಡಲಾಗಿದೆ. ಪ್ರಮುಖವಾಗಿ ಅತಿಗಣ್ಯರಿಗೆ ವಾಹನ ನಿಲ್ಲಿಸಲು ರಾಮಪಥ ಮತ್ತು ಭಕ್ತಿ ಪಥದ ಆರು ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಗಣ್ಯರಿಗೆ ಧರ್ಮಪಥ ಮತ್ತು ಪರಿಕ್ರಮ ಪಥದ 9 ಸ್ಥಳಗಳಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಇವುಗಳ ಕಾವಲಿಗಾಗಿ ಡ್ರೋನ್ ವ್ಯವಸ್ಥೆಯನ್ನೂ ಮಾಡಲಾಗಿದೆ.