ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ‘ನಾಚ್‌-ಗಾನಾ’ ಸಭೆ : ರಾಹುಲ್‌ ವಿಡಿಯೋ ವೈರಲ್‌

| Published : Sep 29 2024, 01:40 AM IST / Updated: Sep 29 2024, 05:00 AM IST

Rahul Gandhi

ಸಾರಾಂಶ

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು 'ನಾಚ್-ಗಾನಾ' ಸಭೆಯಾಗಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ನವದೆಹಲಿ: ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ‘ನಾಚ್-ಗಾನಾ’ (ಹಾಡು ಮತ್ತು ನೃತ್ಯ) ಸಭೆ ಆಗಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆಡಿದ್ದಾರೆ ಎನ್ನಲಾದ ಮಾತಿನ ವಿಡಿಯೋ ವೈರಲ್‌ ಆಗಿದೆ. ಇದರ ವಿರುದ್ಧ ಬಿಜೆಪಿ ಕಿಡಿಕಾರಿದೆ.

‘ಬಿಜೆಪಿ ಅಯೋಧ್ಯೆಯಲ್ಲಿ ಏಕೆ ಸೋತಿತು ಗೊತ್ತೆ? ಅವರು ಅಯೋಧ್ಯೆಯಲ್ಲಿ ಮಂದಿರ ತೆರೆದರು. ನೀವು ಅದಾನಿ, ಅಂಬಾನಿ ಮತ್ತು ಬಚ್ಚನ್ ಅವರನ್ನು ಅಲ್ಲಿ ನೋಡಿದಿರಿ. ಆದರೆ ಒಬ್ಬ ಬಡ ರೈತನೂ ಇರಲಿಲ್ಲ. ಬರೀ ನಾಚ್-ಗಾನಾ (ಹಾಡು-ನೃತ್ಯ) ಇತ್ತು. ಇದೇ ಅವರು ಸೋಲಲು ಕಾರಣ’ ಎಂದಿದ್ದು ವಿಡಿಯೋದಲ್ಲಿದೆ.