ಪ್ರವಾಸಿಗರ ಸೆಳೆಯುವಲ್ಲಿ ಪ್ರಸಕ್ತ ವರ್ಷ ತಾಜ್‌ ಮಹಲ್‌ ಹಿಂದಿಕ್ಕಿದ ಅಯೋಧ್ಯೆಯ ರಾಮಮಂದಿರ

| Published : Dec 22 2024, 01:34 AM IST / Updated: Dec 22 2024, 04:30 AM IST

ಸಾರಾಂಶ

ಕಳೆದ ಜನವರಿಯಲ್ಲಿ ಉದ್ಘಾಟನೆಗೊಂಡ ಅಯೋಧ್ಯೆಯ ರಾಮಮಂದಿರ, ಪ್ರಸಕ್ತ ವರ್ಷ ಅತಿ ಹೆಚ್ಚು ಪ್ರವಾಸಿಗರ ಸೆಳೆದ ತಾಣಗಳ ಪೈಕಿ ವಿಶ್ವವಿಖ್ಯಾತ ತಾಜ್‌ಮಹಲ್‌ ಅನ್ನೂ ಮೀರಿಸಿದೆ.

ಅಯೋಧ್ಯೆ: ಕಳೆದ ಜನವರಿಯಲ್ಲಿ ಉದ್ಘಾಟನೆಗೊಂಡ ಅಯೋಧ್ಯೆಯ ರಾಮಮಂದಿರ, ಪ್ರಸಕ್ತ ವರ್ಷ ಅತಿ ಹೆಚ್ಚು ಪ್ರವಾಸಿಗರ ಸೆಳೆದ ತಾಣಗಳ ಪೈಕಿ ವಿಶ್ವವಿಖ್ಯಾತ ತಾಜ್‌ಮಹಲ್‌ ಅನ್ನೂ ಮೀರಿಸಿದೆ.

ಈ ವರ್ಷದ ಜನವರಿ- ಸೆಪ್ಟೆಂಬರ್‌ ಅವಧಿಯಲ್ಲಿ ಆಗ್ರಾದ ತಾಜ್‌ಮಹಲ್‌ಗೆ 12.5 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರೆ, ಇದೇ ಅವಧಿಯಲ್ಲಿ ರಾಮಮಂದಿರ ಇರುವ ಅಯೋಧ್ಯೆಗೆ 13.5 ಕೋಟಿ ಜನರು ಭೇಟಿ ನೀಡಿದ್ದಾರೆ.

ಅಯೋಧ್ಯೆಯ ಆಕರ್ಷಣೆ ಏನು?:

ಅಯೋಧ್ಯೆಗೆ ಬರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಲು ರಾಮ ಮಂದಿರ ಉದ್ಘಾಟನೆಯನ್ನು ಪ್ರಮುಖ ಕಾರಣ ಎಂದು ಪರಿಗಣಿಸಲಾಗಿದೆ. ಜತೆಗೆ, ವಾರಾಣಸಿ, ಮಥುರಾ, ಪ್ರಯಾಗರಾಜ್‌, ಮಿರ್ಜಾಪುರಗಳಿಗೂ ಭಕ್ತರು ಭೇಟಿ ನೀಡುತ್ತಿದ್ದು, ಉತ್ತರಪ್ರದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಸರಿಸುಮಾರು ಶೇ.70ರಷ್ಟು ಹೆಚ್ಚಿದೆ.

ತಾಜ್‌ಗೆ ವಿದೇಶಿಗರೇ ಹೆಚ್ಚು:

ಆಗ್ರಾಗೆ ಬರುವ ಭಾರತೀಯರ ಸಂಖ್ಯೆಯಲ್ಲಿ ಇಳಿಕೆಯಾದರೂ ವಿದೇಶಿಗರ ಪಾಲಿಗೆ ತಾಜ್‌ಮಹಲ್‌ ವಿಶೇಷ ತಾಣವಾಗಿಯೇ ಉಳಿದಿದ್ದು, 2023-24 ಅವಧಿಯಲ್ಲಿ 2.7 ಕೋಟಿ ಜನ ಭೇಟಿ ನೀಡಿದ್ದಾರೆ.

ಸ್ಥಳಗಳುಪ್ರವಾಸಿಗರು

ಅಯೋಧ್ಯೆ13.5 ಕೋಟಿ

ತಾಜ್‌ ಮಹಲ್‌12.5 ಕೋಟಿ

ವಾರಾಣಸಿ6.2 ಕೋಟಿ

ಮಥುರಾ6.8 ಕೋಟಿ

ಪ್ರಯಾಗರಾಜ್‌4.8 ಕೋಟಿ

ಮಿರ್ಜಾಪುರ1.1 ಕೋಟಿ