ಸಾರಾಂಶ
ರಾಜ್ಯದ ಸ್ಥಳೀಯ ಚುನಾವಣೆಗಳಲ್ಲಿ ಇತರೆ ಹಿಂದುಳಿದ ವರ್ಗಕ್ಕೆ ಶೇ.42ರಷ್ಟು ಮೀಸಲಾತಿ ನೀಡುವ ತೆಲಂಗಾಣ ಸರ್ಕಾರದ ಆದೇಶಕ್ಕೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಮುಂದಿನ ಆದೇಶದ ವರೆಗೆ ಅದರ ಜಾರಿಯನ್ನು ವಜಾಗೊಳಿಸಿದೆ.
ಹೈದ್ರಾಬಾದ್: ರಾಜ್ಯದ ಸ್ಥಳೀಯ ಚುನಾವಣೆಗಳಲ್ಲಿ ಇತರೆ ಹಿಂದುಳಿದ ವರ್ಗಕ್ಕೆ ಶೇ.42ರಷ್ಟು ಮೀಸಲಾತಿ ನೀಡುವ ತೆಲಂಗಾಣ ಸರ್ಕಾರದ ಆದೇಶಕ್ಕೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಮುಂದಿನ ಆದೇಶದ ವರೆಗೆ ಅದರ ಜಾರಿಯನ್ನು ವಜಾಗೊಳಿಸಿದೆ.
ಒಬಿಸಿ ಮೀಸಲು ಮಿತಿಯನ್ನು ಶೇ.23ರಿಂದ ಶೇ.42ಕ್ಕೆ ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ರಾಜ್ಯಪಾಲರ ಸಹಿ ಬಿದ್ದಿಲ್ಲ. ಜೊತೆಗೆ ಮೀಸಲು ಮಿತಿ ಹೆಚ್ಚಳವು, ಒಟ್ಟಾರೆ ಮೀಸಲು ಮಿತಿ ಶೇ.50ರ ಗಡಿ ದಾಟಬಾರದೆಂಬ ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ.
ಹೀಗಾಗಿ ಮೀಸಲು ಜಾರಿಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ 7 ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮೀಸಲು ಜಾರಿಗೆ ಮಧ್ಯಂತರ ತಡೆ ನೀಡಿದೆ. ವಾದ-ಪ್ರತಿವಾದ ಆಲಿಸಿದ ಪೀಠ, ತನ್ನ ವಾದವನ್ನು ಮಂಡಿಸಲು ರಾಜ್ಯ ಸರ್ಕಾರಕ್ಕೆ 4 ವಾರ ಸಮಯ ನೀಡಿದೆ. ಜತೆಗೆ ಅದಕ್ಕೆ ಆಕ್ಷೇಪ ಸಲ್ಲಿಸಲು 2 ವಾರಗಳ ಅವಕಾಶ ಕೊಟ್ಟಿದ್ದು, ವಿಚಾರಣೆಯನ್ನು 6 ವಾರಗಳ ಬಳಿಕ ನಡೆಸುವುದಾಗಿ ನಿಗದಿಪಡಿಸಿದೆ.