ಸಾರಾಂಶ
ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಮೂಲಕ ಚಲಿಸುವ ವಿಶ್ವದ ಮೊದಲ ಮೋಟಾರ್ ಸೈಕಲ್‌ನ್ನು ಬಜಾಜ್ ಕಂಪನಿ ಶುಕ್ರವಾರ ಬಿಡುಗಡೆ ಮಾಡಿದೆ. ಇದಕ್ಕೆ ‘ಫ್ರೀಡಂ’ ಎಂದು ಹೆಸರಿಡಲಾಗಿದೆ ಹಾಗೂ ಇದರ ಬೆಲೆ ₹ 95 ಸಾವಿರ ರು.ನಿಂದ ಆರಂಭವಾಗಲಿದೆ.
ಮುಂಬೈ: ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಮೂಲಕ ಚಲಿಸುವ ವಿಶ್ವದ ಮೊದಲ ಮೋಟಾರ್ ಸೈಕಲ್‌ನ್ನು ಬಜಾಜ್ ಕಂಪನಿ ಶುಕ್ರವಾರ ಬಿಡುಗಡೆ ಮಾಡಿದೆ. ಇದಕ್ಕೆ ‘ಫ್ರೀಡಂ’ ಎಂದು ಹೆಸರಿಡಲಾಗಿದೆ ಹಾಗೂ ಇದರ ಬೆಲೆ ₹ 95 ಸಾವಿರ ರು.ನಿಂದ ಆರಂಭವಾಗಲಿದೆ.
ಈ ಬೈಕ್ ಪೆಟ್ರೋಲ್ ಹಾಗೂ ಸಿಎನ್‌ಜಿನಿಂದಲೂ ಚಲಿಸುತ್ತದೆ. ಚಾಲಕರು ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಫ್ರೀಡಂ ಎನ್‌ಜಿಒ4 ಡ್ರಮ್ ಬೈಕ್ ಬೆಲೆ ₹ 95,000, ಮಿಡ್-ಸ್ಪೆಕ್ ಎನ್‌ಜಿಒ4 ಡ್ರಮ್ ಎಲ್‌ಇಡಿ ಬೈಕ್ ಬೆಲೆ ₹ 1.05 ಲಕ್ಷ ಹಾಗೂ ಟಾಪ್-ಸ್ಪೆಕ್ ಎನ್‌ಜಿಒ4 ಡಿಸ್ಕ್ ಎಲ್‌ಇಡಿ ಬೈಕ್ ಬೆಲೆ ₹ 1.10 ಲಕ್ಷ ಬೆಲೆ ಇದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಬುಕ್ಕಿಂಗ್ ಆರಂಭವಾಗಿದೆ ಎಂದು ಕಂಪನಿ ತಿಳಿಸಿದೆ.