ಸಾರಾಂಶ
2047ರ ಹೊತ್ತಿಗೆ ಭಾರತ ಉನ್ನತ ಮಧ್ಯಮ ಆದಾಯದ ಆರ್ಥಿಕತೆಯಾಗಬಹುದು.ಆದಾಗ್ಯೂ ಜಾಗತಿಕ ಶಕ್ತಿಯಾಗಿ (ಸೂಪರ್ ಪವರ್) ಆಗಿ ರೂಪಗೊಳ್ಳುವುದು ಎಂದು ಫೈನಾನ್ಶಿಯಲ್ ಟೈಮ್ಸ್‌ನ ಮುಖ್ಯ ಆರ್ಥಿಕ ನಿರೂಪಕ ಮಾರ್ಟಿನ್ ವೂಲ್ಫ್ ಶುಕ್ರವಾರ ಹೇಳಿದ್ದಾರೆ.
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ 2047ರ ಹೊತ್ತಿಗೆ ಭಾರತ ಉನ್ನತ ಆದಾಯದ ಆರ್ಥಿಕತೆಯಾಗುವುದು ಅಸಂಭವ. ಆದರೆ ಉನ್ನತ ಮಧ್ಯಮ ಆದಾಯದ ಆರ್ಥಿಕತೆಯಾಗಬಹುದು.ಆದಾಗ್ಯೂ ಜಾಗತಿಕ ಶಕ್ತಿಯಾಗಿ (ಸೂಪರ್ ಪವರ್) ಆಗಿ ರೂಪಗೊಳ್ಳುವುದು ಎಂದು ಫೈನಾನ್ಶಿಯಲ್ ಟೈಮ್ಸ್‌ನ ಮುಖ್ಯ ಆರ್ಥಿಕ ನಿರೂಪಕ ಮಾರ್ಟಿನ್ ವೂಲ್ಫ್ ಶುಕ್ರವಾರ ಹೇಳಿದ್ದಾರೆ.
ಶುಕ್ರವಾರ ಸಮಾರಂಭವೊಂದರಲ್ಲಿ ಅವರು ಮಾತನಾಡಿ, ‘ಆರ್ಥಿಕತೆಯ ನಿಧಾನ ಬೆಳವಣಿಗೆ, ಆಘಾತ ಹಾಗು ದೌರ್ಬಲ್ಯದಿಂದ ಭಾರತದ ಬೆಳವಣಿಗೆ ಕಠಿಣವಾಗಲಿದೆ. ತನ್ನ ಪ್ರಭಾವ ಬಳಸಿ ಜಗತ್ತಿನ ಪರಿಸ್ಥಿತಿಯನ್ನು ಅನುಕೂಲಕರಗೊಳಿಸುವತ್ತ ಶ್ರಮಿಸಬೇಕಿದೆ. ಮನಸ್ಸು ಮಾಡಿದರೆ ಸರಕು ಮತ್ತು ಸೇವೆಗಳ ಜಾಗತಿಕ ಪೂರೈಕೆಯಲ್ಲಿ ಚೀನಾವನ್ನು ಹಿಂದಿಕ್ಕಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ವಿಶ್ವದ 5ನೇ ಆರ್ಥಿಕತೆಯಾಗಿರುವ ಭಾರತ ತನ್ನ 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಿರಲಿದೆ ಎಂದು ಮೋದಿ ಕಳೆದ ವರ್ಷ ವಿಶ್ವಾಸ ವ್ಯಕ್ತಪಡಿಸಿದ್ದರು.
)
;Resize=(128,128))
;Resize=(128,128))
;Resize=(128,128))
;Resize=(128,128))