ಸಾರಾಂಶ
ಐಟಿಸಿ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ರಫ್ತುಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಕರುಣೇಶ್ ಬಜಾಜ್ ಅವರನ್ನು 2025-2026ನೇ ಸಾಲಿಗೆ ಮುದ್ರಣ ಮಾಧ್ಯಮಗಳ ಪ್ರಮಾಣೀಕರಣ ಮತ್ತು ಲೆಕ್ಕಪರಿಶೋಧನಾ ಸಂಸ್ಥೆಯಾದ ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್‌ನ (ಎಬಿಸಿ) ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
-ಬೆನೆಟ್ ಕೋಲ್ಮನ್ ನಿರ್ದೇಶಕ ಮೋಹಿತ್ ಜೈನ್‌ಗೆ ಉಪಾಧ್ಯಕ್ಷ ಪಟ್ಟ
ಮುಂಬೈ: ಐಟಿಸಿ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ರಫ್ತುಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಕರುಣೇಶ್ ಬಜಾಜ್ ಅವರನ್ನು 2025-2026ನೇ ಸಾಲಿಗೆ ಮುದ್ರಣ ಮಾಧ್ಯಮಗಳ ಪ್ರಮಾಣೀಕರಣ ಮತ್ತು ಲೆಕ್ಕಪರಿಶೋಧನಾ ಸಂಸ್ಥೆಯಾದ ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್‌ನ (ಎಬಿಸಿ) ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಬೆನೆಟ್ ಕೋಲ್ಮನ್ & ಕಂ. ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಕಾಶನ) ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮೋಹಿತ್ ಜೈನ್ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಅನಿರುದ್ಧ ಹಾಲ್ದಾರ್, ಪಾರ್ಥೋ ಬ್ಯಾನರ್ಜಿ, ಧ್ರುವ ಮುಖರ್ಜಿ, ರಿಯಾಜ್ ಮ್ಯಾಥ್ಯೂ, ಗಿರೀಶ್ ಅಗರ್ವಾಲ್, ಶೈಲೇಶ್ ಗುಪ್ತಾ, ಕರಣ್ ದರ್ಬಾ, ಪ್ರತಾಪ್ ಜಿ. ಪವಾರ್, ಆದಿಮೂಲಂ, ವಿಕ್ರಮ್ ಸಖುಜಾ, ಶ್ರೀನಿವಾಸನ್ ಕೆ. ಸ್ವಾಮಿ, ಪ್ರಶಾಂತ್ ಕುಮಾರ್, ವೈಶಾಲಿ ವರ್ಮಾ, ಸೇಜಲ್ ಶಾ ಹಾಗೂ ಆದಿಲ್ ಕಸಬ್ 2025-2026 ನೇ ಸಾಲಿನ ನಿರ್ವಹಣಾ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.3 ದಶಕಗಳ ಅನುಭವಿ ಅಧ್ಯಕ್ಷರಾಗಿ ಆಯ್ಕೆ:
ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕರುಣೇಶ್ ಬಜಾಜ್ ಗ್ರಾಹಕ ಸರಕುಗಳು ಮತ್ತು ಚಿಲ್ಲರೆ ವ್ಯಾಪಾರ ವಲಯಗಳಲ್ಲಿ ಬ್ರ್ಯಾಂಡ್ ನಿರ್ಮಾಣ, ಮಾರ್ಕೆಟಿಂಗ್ ತಂತ್ರ ಮತ್ತು ನಾಯಕತ್ವ ಕ್ಷೇತ್ರಗಳಲ್ಲಿ 3 ದಶಕಗಳಿಗೂ ಅಧಿಕ ಅನುಭವ ಹೊಂದಿದ್ದಾರೆ. ಪ್ರಸ್ತುತ ಐಟಿಸಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 25ಕ್ಕೂ ಅಧಿಕ ವರ್ಷಗಳಿಂದ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಹಲವು ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.