ನಟಿ ಅಂಜಲಿ ಜೊತೆ ಬಾಲಕೃಷ್ಣಅನುಚಿತ ವರ್ತನೆ, ಭಾರೀ ಟೀಕೆ

| Published : May 31 2024, 02:17 AM IST / Updated: May 31 2024, 04:15 AM IST

ನಟಿ ಅಂಜಲಿ ಜೊತೆ ಬಾಲಕೃಷ್ಣಅನುಚಿತ ವರ್ತನೆ, ಭಾರೀ ಟೀಕೆ
Share this Article
  • FB
  • TW
  • Linkdin
  • Email

ಸಾರಾಂಶ

ಟಾಲಿವುಡ್‌ನ ಖ್ಯಾತ ನಟ , ರಾಜಕಾರಣಿ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ತಮ್ಮ ಅನುಚಿತ ವರ್ತನೆಯಿಂದ ಸುದ್ದಿಯಾಗಿದ್ದಾರೆ.  

ಹೈದರಾಬಾದ್ : ಟಾಲಿವುಡ್‌ನ ಖ್ಯಾತ ನಟ , ರಾಜಕಾರಣಿ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ತಮ್ಮ ಅನುಚಿತ ವರ್ತನೆಯಿಂದ ಸುದ್ದಿಯಾಗಿದ್ದಾರೆ. ಸಿನಿಮಾ ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿ ನಿಂತಿದ್ದ ನಟಿ ಅಂಜಲಿಯನ್ನು ಏಕಾಏಕಿ ತಳ್ಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟನ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.

‘ಗ್ಯಾಂಗ್ಸ್‌ ಆಫ್‌ ಗೋದಾವರಿ’ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಟ ನಂದಮೂರಿ ಬಾಲಕೃಷ್ಣ, ನಟ ವಿಶ್ವಕ್‌ ಸೇನ್‌, ನಟಿ ಅಂಜಲಿ, ನಟಿ ನೇಹಾ ಶೆಟ್ಟಿ ಸೇರಿದಂತೆ ಹಲವು ತಾರೆಗಳು ಪಾಲ್ಗೊಂಡಿದ್ದರು. 

ಈ ಸಂದರ್ಭದಲ್ಲಿ ಬಾಲಕೃಷ್ಣ ವೇದಿಕೆ ಮೇಲೆ ಆಗಮಿಸಿದ್ದಾರೆ. ಈ ವೇಳೆ ಅಲ್ಲಿದ್ದ ಕೆಲ ನಟಿಯರನ್ನು ಪಕ್ಕಕ್ಕೆ ಸರಿಯುವಂತೆ ಬಾಲಕೃಷ್ಣ ಸೂಚಿಸಿದ್ದಾರೆ. ಇದು ನಟಿ ಅಂಜಲಿಗೆ ಗೊತ್ತಾಗಿರಲಿಲ್ಲ. ಈ ವೇಳೆ ಮುನಿಸಿಕೊಂಡ ಬಾಲಕೃಷ್ಣ ಅಂಜಲಿಯನ್ನು ಪಕ್ಕಕ್ಕೆ ತಳ್ಳಿದ್ದಾರೆ.ಏಕಾಏಕಿ ನಟನ ವರ್ತನೆಯಿಂದ ನಟಿ ಕೊಂಚ ಮುಜುಗರಕ್ಕೀಡಾದರು. ಆದರೆ ಏನೂ ಆಗದಂತೆ ನಗು ಬೀರಿದರು. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು, ನೆಟ್ಟಿಗರು ಬಾಲಯ್ಯನ ವಿರುದ್ಧ ಕಿಡಿಕಾರುತ್ತಿದ್ದಾರೆ.