ಎಸ್ಐಆರ್‌ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ಅಖಿಲ ಭಾರತ ವಿದ್ಯಾರ್ಥಿ ಸಂಸ್ಥೆ (ಎಐಎಸ್ಎ) ರಾಷ್ಟ್ರೀಯ ಅಧ್ಯಕ್ಷೆ ಮತ್ತು ಹೋರಾಟಗಾರ್ತಿ ನೇಹಾ ಬೋರಾ ಅವರು, ‘ಬಾಂಗ್ಲಾದೇಶದ ಹೋರಾಟವೇ ನಮಗೆ ಸ್ಫೂರ್ತಿ’ ಎಂದಿರುವುದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ: ಎಸ್ಐಆರ್‌ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ಅಖಿಲ ಭಾರತ ವಿದ್ಯಾರ್ಥಿ ಸಂಸ್ಥೆ (ಎಐಎಸ್ಎ) ರಾಷ್ಟ್ರೀಯ ಅಧ್ಯಕ್ಷೆ ಮತ್ತು ಹೋರಾಟಗಾರ್ತಿ ನೇಹಾ ಬೋರಾ ಅವರು, ‘ಬಾಂಗ್ಲಾದೇಶದ ಹೋರಾಟವೇ ನಮಗೆ ಸ್ಫೂರ್ತಿ’ ಎಂದಿರುವುದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಇದೇ ವೇಳೆ, ನೇಹಾ ಹೇಳಿಕೆಯನ್ನು ಜಿರಳೆ ಪಕ್ಷದ ಬೆಂಬಲಿಗ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಮರ್ಥಿಸಿ, ‘ದೇಶದಲ್ಲಿ ಸರ್ಕಾರ ಬದಲಾವಣೆ (ರೆಜೀಮ್ ಚೇಂಜ್‌) ಆಗಬೇಕು. ಇದು ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಹಕ್ಕು’ ಎಂದು ಹೇಳಿದ್ದಾರೆ.

ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಕಿಡಿ

ಸರ್ಕಾರ ಬದಲಾವಣೆಗೆ ಸಿಜೆಪಿಗರು ನೀಡಿದ ಕರೆಗೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಕಿಡಿಕಾರಿದ್ದು, ‘ಸಿಜೆಪಿಗರು ಕ್ಷಿಪ್ರಕ್ರಾಂತಿ ನಡೆಸಿ ಭಾರತವನ್ನು ಬಾಂಗ್ಲಾದೇಶ ಮಾಡಲು ಯತ್ನಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ’ ಎಂದಿದ್ದಾರೆ.

ನೇಹಾ ಹೇಳಿದ್ದೇನು?

‘ಭಾರತದಲ್ಲಿ ಬೆಳೆಯುತ್ತಿರುವ ಜೆನ್‌ ಝೀ (ಯುವಕರ) ಪ್ರತಿಭಟನೆಗಳಿಗೆ ಬಾಂಗ್ಲಾದೇಶದ ಯುವಜನರ ಹೋರಾಟವೇ ಸ್ಪೂರ್ತಿ, ಬಾಂಗ್ಲಾದೇಶದ ಅನುಭವವು ಭಾರತದ ಯುವಕರಿಗೆ ದಾರಿ ತೋರಿಸುತ್ತದೆ’ ಎಂದು ನೇಹಾ ಅವರು ಬಾಂಗ್ಲಾದ ಅತಿದೊಡ್ಡ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಸಮಾಜವಾದಿ ವಿದ್ಯಾರ್ಥಿ ರಂಗದ (ಎಸ್ಎಸ್‌ಎಸ್‌) ಸಮ್ಮೇಳನವನ್ನು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದರು ಎನ್ನಲಾಗಿದೆ. ಬಿಜೆಪಿ ಈ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, ‘ದೇಶದಲ್ಲಿ ಅರಾಜಕತೆ ಸೃಷ್ಟಿಗೆ ನಡೆದ ಹುನ್ನಾರ ಇದು’ ಎಂದಿದೆ.