ಬಾಂಗ್ಲಾ ಸಂಸದನ ಕೊಲೆಗೆ ₹80 ಕೋಟಿ ಚಿನ್ನ ಕಳ್ಳಸಾಗಣೆ ವ್ಯವಹಾರ ಕಾರಣ!

| Published : May 27 2024, 01:15 AM IST / Updated: May 27 2024, 04:34 AM IST

Anwarul Azim Anar
ಬಾಂಗ್ಲಾ ಸಂಸದನ ಕೊಲೆಗೆ ₹80 ಕೋಟಿ ಚಿನ್ನ ಕಳ್ಳಸಾಗಣೆ ವ್ಯವಹಾರ ಕಾರಣ!
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವಾರ ಕೋಲ್ಕತಾದಲ್ಲಿ ಹತರಾದ ಬಾಂಗ್ಲಾದೇಶ ಸಂಸದ ಅನ್ವರುಲ್‌ ಅಜೀಂ ಅನಾರ್‌ ಅವರ ಸಾವಿಗೆ ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ನಡೆಯುವ 80 ಕೋಟಿ ರು. ಮೌಲ್ಯದ ಚಿನ್ನಕಳ್ಳಸಾಗಣೆ ಹಗರಣದ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಕೋಲ್ಕತಾ: ಕಳೆದ ವಾರ ಕೋಲ್ಕತಾದಲ್ಲಿ ಹತರಾದ ಬಾಂಗ್ಲಾದೇಶ ಸಂಸದ ಅನ್ವರುಲ್‌ ಅಜೀಂ ಅನಾರ್‌ ಅವರ ಸಾವಿಗೆ ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ನಡೆಯುವ 80 ಕೋಟಿ ರು. ಮೌಲ್ಯದ ಚಿನ್ನಕಳ್ಳಸಾಗಣೆ ಹಗರಣದ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಅನ್ವರುಲ್‌ ಹಾಗೂ ಅವರ ಸ್ನೇಹಿತ ಶಹೀನ್‌ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿದ್ದರು. ಕೆಲ ತಿಂಗಳ ಹಿಂದೆ ಇದರಲ್ಲಿ ಹೆಚ್ಚಿನ ಪಾಲು ಬೇಕೆಂದು ಶಹೀನ್‌ ಕೇಳಿದ್ದ. ಆದರೆ ಇದಕ್ಕೆ ಅನ್ವರುಲ್‌ ಒಪ್ಪಿರಲಿಲ್ಲ. ಇದರ ಜೊತೆಗೆ ಅನ್ವರುಲ್‌ ಇಡೀ ದಂದೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ. 

ಇದರ ಒಟ್ಟು ಮೌಲ್ಯ 80 ಕೋಟಿ ರು.ನಷ್ಟಿತ್ತು. ಈ ಕಾರಣವಾಗಿ ಇವರಿಬ್ಬರ ನಡುವೆ ವೈಮನಸ್ಯ ಉಂಟಾಗಿತ್ತು. ಇದರ ಪರಿಣಾಮ ಅನ್ವರುಲ್‌ ಹತ್ಯೆಗೆ 5 ಕೋಟಿ ರು. ಶಹೀನ್‌ ಸುಪಾರಿ ಕೊಟ್ಟಿದ್ದ ಎಂದು ಬಾಂಗ್ಲಾದೇಶ ಗುಪ್ತಚರ ಸಂಸ್ಥೆ ಹೇಳಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.