ಇಂದು, ನಾಳೆ ಬ್ಯಾಂಕ್‌ ಎಲ್‌ಐಸಿ ಕಚೇರಿಗಳು ಪೂರ್ಣ ದಿನ ಓಪನ್‌

| Published : Mar 30 2024, 12:50 AM IST

ಸಾರಾಂಶ

ಜೀವ ವಿಮಾ ನಿಗಮ (ಎಲ್‌ಐಸಿ) ಸಂಸ್ಥೆಯು ದೇಶದಾದ್ಯಂತ ವಾರಾಂತ್ಯದ ದಿನಗಳಾದ ಮಾ.30 ಶನಿವಾರ ಮತ್ತು ಮಾ.31 ಭಾನುವಾರ ಗ್ರಾಹಕರಿಗೆ ಸೇವೆಗಾಗಿ ತನ್ನ ಕಚೇರಿಗಳನ್ನು ತೆರೆಯಲು ತೀರ್ಮಾನಿಸಿದೆ.

ನವದೆಹಲಿ: ಜೀವ ವಿಮಾ ನಿಗಮ (ಎಲ್‌ಐಸಿ) ಸಂಸ್ಥೆಯು ದೇಶದಾದ್ಯಂತ ವಾರಾಂತ್ಯದ ದಿನಗಳಾದ ಮಾ.30 ಶನಿವಾರ ಮತ್ತು ಮಾ.31 ಭಾನುವಾರ ಗ್ರಾಹಕರಿಗೆ ಸೇವೆಗಾಗಿ ತನ್ನ ಕಚೇರಿಗಳನ್ನು ತೆರೆಯಲು ತೀರ್ಮಾನಿಸಿದೆ. ಪ್ರಸಕ್ತ ಹಣಕಾಸಿನ ವರ್ಷ ಅಂತ್ಯ ಹಿನ್ನೆಲೆ ತೆರಿಗೆ ಉಳಿಕೆ ಚಟುವಟಿಕೆಗಳನ್ನು ಪೂರ್ಣಗೊಳಿಸಿಕೊಳ್ಳಲು ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಎಲ್‌ಐಸಿ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ. ‘ಹಣಕಾಸಿನ ವರ್ಷಾಂತ್ಯದಲ್ಲಿ ವಿಮಾದಾರರಿಗೆ ಯಾವುದೇ ಆರ್ಥಿಕ ವಹಿವಾಟಿನ ತೊಂದರೆಯಾಗದಂತೆ ತನ್ನ ವಲಯ ಮತ್ತು ವ್ಯಾಪ್ತಿಯ ಎಲ್ಲ ಕಚೇರಿಗಳು ಮಾ.30 ಮತ್ತು 31 ರಂದು ಸಾಮಾನ್ಯ ಔದ್ಯೋಗಿಕ ಕೆಲಸದ ಅವಧಿಯಂತೆ ಕಾರ್ಯನಿರ್ವಹಿಸಬೇಕು ಎಂದು ನಿರ್ಧರಿಸಲಾಗಿದೆ’ ಎಂದು ಎಲ್‌ಐಸಿ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇನ್ನು ಸರ್ಕಾರದೊಂದಿಗೆ ವ್ಯವಹಾರ ಹೊಂದಿರುವ ಸೀಮಿತ ಬ್ಯಾಂಕ್‌ ಶಾಖೆಗಳು ಭಾನುವಾರ ಕೂಡಾ ತೆರೆದಿರುತ್ತವೆ ಎಂದು ಬ್ಯಾಂಕ್‌ಗಳು ಘೋಷಣೆ ಮಾಡಿದ್ದವು.