ಜೆರ್ಸಿ ಪ್ರಾಯೋಜಕತ್ವದ ಮೂಲ ಬೆಲೆ ₹3.5 ಕೋಟಿಗೆ ಏರಿಸಿದ ಬಿಸಿಸಿಐ !

| N/A | Published : Sep 06 2025, 01:00 AM IST

ಸಾರಾಂಶ

  ಜೆರ್ಸಿ ಪ್ರಾಯೋಜಕತ್ವದ ಮೂಲಬೆಲೆಯನ್ನು ಬಿಸಿಸಿಐ ಏರಿಕೆ ಮಾಡಲು ನಿರ್ಧರಿಸಿದ್ದು, ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯಕ್ಕೆ ₹3.5 ಕೋಟಿ, ಐಸಿಸಿ, ಏಷ್ಯಾ ಕ್ರಿಕೆಟ್‌ ಸಮಿತಿ (ಎಸಿಸಿ) ಆಯೋಜಿತ ಟೂರ್ನಿಗಳ ಪ್ರತಿ ಪಂದ್ಯಕ್ಕೆ ₹1.5 ಕೋಟಿ ಮೂಲ ಬೆಲೆ ನಿಗದಿ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

- ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯಕ್ಕೆ ₹3.5 ಕೋಟಿ- ಐಸಿಸಿ, ಎಸಿಸಿ ಟೂರ್ನಿಯ ಪಂದ್ಯಕ್ಕೆ ₹1.5 ಕೋಟಿ ನವದೆಹಲಿ: ಭಾರತ ಕ್ರಿಕೆಟ್‌ ತಂಡಕ್ಕೆ ಪ್ರಾಯೋಜಕತ್ವ ನೀಡುವುದು ಇನ್ನಷ್ಟು ದುಬಾರಿಯಾಗಲಿದೆ. ಜೆರ್ಸಿ ಪ್ರಾಯೋಜಕತ್ವದ ಮೂಲಬೆಲೆಯನ್ನು ಬಿಸಿಸಿಐ ಏರಿಕೆ ಮಾಡಲು ನಿರ್ಧರಿಸಿದ್ದು, ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯಕ್ಕೆ ₹3.5 ಕೋಟಿ, ಐಸಿಸಿ, ಏಷ್ಯಾ ಕ್ರಿಕೆಟ್‌ ಸಮಿತಿ (ಎಸಿಸಿ) ಆಯೋಜಿತ ಟೂರ್ನಿಗಳ ಪ್ರತಿ ಪಂದ್ಯಕ್ಕೆ ₹1.5 ಕೋಟಿ ಮೂಲ ಬೆಲೆ ನಿಗದಿ ಮಾಡಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸ ಕಾನೂನು ಹಂತ ಕಾರಣ, ಡ್ರೀಮ್‌ 11 ಜತೆಗಿನ ಒಪ್ಪಂದವನ್ನು ಬಿಸಿಸಿಐ ಕೊನೆಗೊಳಿಸಿತ್ತು. ಡ್ರೀಮ್‌ 11 ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯ ಹಾಗೂ ಐಸಿಸಿ, ಎಸಿಸಿ ಟೂರ್ನಿಗಳ ಪ್ರತಿ ಪಂದ್ಯಕ್ಕೆ ಕ್ರಮವಾಗಿ ₹3.17 ಕೋಟಿ ಹಾಗೂ ₹1.12 ಕೋಟಿ ಪಾವತಿಸುತ್ತಿತ್ತು.

ಜೆರ್ಸಿ ಪ್ರಾಯೋಜಕತ್ವಕ್ಕೆ ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಸೆ.16 ಗಡುವು ನೀಡಿದೆ. ಅಂದೇ ಹೊಸ ಪ್ರಾಯೋಜಕರ ನಿರ್ಧಾರವಾಗುವ ಸಾಧ್ಯತೆ ಇದ್ದು, ಬಿಸಿಸಿಐ ಅಂದಾಜು ₹400 ಕೋಟಿಗಿಂತಲೂ ಹೆಚ್ಚು ಆದಾಯ ನಿರೀಕ್ಷೆ ಮಾಡುತ್ತಿದೆ. ದ್ವಿಪಕ್ಷೀಯ ಪಂದ್ಯಕ್ಕೆ

ಹೆಚ್ಚು ಮೊತ್ತ ಏಕೆ?

ದ್ವಿಪಕ್ಷೀಯ ಸರಣಿಗಳಲ್ಲಿ ಪ್ರಾಯೋಜಕರ ಲೋಗೋವನ್ನು ಆಟಗಾರರ ಜೆರ್ಸಿಯ ಮುಂಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. ಹೆಚ್ಚಿನ ಪ್ರಚಾರ ಸಿಗುವ ಕಾರಣ ದುಬಾರಿ ಮೊತ್ತ ಪಡೆಯಲಾಗುತ್ತೆ. ಐಸಿಸಿ, ಎಸಿಸಿ ಟೂರ್ನಿಗಳಲ್ಲಿ ಆಟಗಾರರ ಜೆರ್ಸಿಯ ಮುಂಭಾಗದಲ್ಲಿ ದೇಶದ ಹೆಸರು ಇರಲಿದ್ದು, ತೋಳಗಳ ಮೇಲಷ್ಟೇ ಪ್ರಾಯೋಜಕರ ಲೋಗೋ ಪ್ರದರ್ಶನಗೊಳ್ಳಲಿದೆ.

Read more Articles on