ವೇಶ್ಯಾವಾಟಿಕೆ: ಬಂಗಾಳ ಬಿಜೆಪಿ ನಾಯಕ ಘೋಷ್‌ ಬಂಧನ

| Published : Feb 24 2024, 02:32 AM IST / Updated: Feb 24 2024, 07:51 AM IST

ಸಾರಾಂಶ

ಸಂದೇಶ್‌ಖಾಲಿ ಕೇಸಿನ ನಡುವೆಯೇ ಬಿಜೆಪಿಗೆ ಮುಜುಗರವಾಗುವ ಸಂಗತಿ ನಡೆದಿದ್ದು, ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಗಾಳದ ಬಿಜೆಪಿ ನಾಯಕ ಸಬ್ಯಸಾಚಿ ಘೋಷ್‌ನನ್ನು ಬಂಧಿಸಲಾಗಿದೆ.

ಕೋಲ್ಕತಾ: ಪ. ಬಂಗಾಳದ ಸಂದೇಶ್‌ಖಾಲಿಯಲ್ಲಿ ಅಮಾಯಕ ಮಹಿಳೆಯರ ಮೇಲೆ ಟಿಎಂಸಿ ಕಾರ್ಯಕರ್ತರು ಅತ್ಯಚಾರ ಎಸಗಿದ್ದಾರೆ ಎಂಬ ವಿವಾದ ಭುಗಿಲೆದ್ದಿರುವ ನಡುವೆಯೇ ಹೌರಾ ನಗರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇರೆಗೆ ಶುಕ್ರವಾರ ಪೊಲೀಸರು ಬಿಜೆಪಿ ನಾಯಕ ಸಬ್ಯಸಾಚಿ ಘೋಷ್‌ ಅವರನ್ನು ಬಂಧಿಸಿದ್ದಾರೆ.

ಸಂದೇಶ್‌ಖಾಲಿ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಮೇಲೆ ಬಿಜೆಪಿಗರು ಮುಗಿಬಿದ್ದಿರುವ ನಡಯವೆಯೇ, ಸಬ್ಯಸಾಚಿ ಬಂಧನ ಬಿಜೆಪಿಗೆ ತೀವ್ರ ಮುಜಗರ ಉಂಟು ಮಾಡಿದ್ದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

‘ರಾಜ್ಯದಲ್ಲಿ ಬಂಗಾಳ ಪೊಲೀಸರು ಹೌರಾದ ಸಂಕ್ರೈಲ್‌ನಲ್ಲಿ ಸಬ್ಯಸಾಚಿ ನಡೆಸುತ್ತಿದ್ದ ಹೋಟೆಲ್‌ ಮೇಲೆ ದಾಳಿ ಮಾಡಿ ಘೋಷ್‌ ಸೇರಿ 11 ಮಂದಿಯನ್ನು ಬಂಧಿಸಿ 6 ಸಂತ್ರಸ್ತರನ್ನು ರಕ್ಷಿಸಿದ್ದಾರೆ. 

ಇದೇ ಬಿಜೆಪಿ. ಅವರು ಹೆಣ್ಣು ಮಕ್ಕಳನ್ನು ರಕ್ಷಿಸುವುದಿಲ್ಲ. ವೇಶ್ಯವಾಟಿಕೆ ದಂಧೆಕೋರರನ್ನು ರಕ್ಷಿಸುತ್ತದೆ’ ಎಂದು ಟಿಎಂಸಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. 

ಸಂದೇಶ್‌ಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್‌ ಶಾಜಹಾನ್‌ ತಲೆಮರೆಸಿಕೊಂಡಿದ್ದಾರೆ.