ಶಾಜಹಾನ್‌ ಬಂಧಿಸಲು ದೀದಿ ಸರ್ಕಾರಕ್ಕೆ ಗೌರ್ನರ್‌ 72 ಗಂಟೆ ಗಡುವು

| Published : Feb 28 2024, 02:32 AM IST

ಶಾಜಹಾನ್‌ ಬಂಧಿಸಲು ದೀದಿ ಸರ್ಕಾರಕ್ಕೆ ಗೌರ್ನರ್‌ 72 ಗಂಟೆ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಸಂದೇಶ್‌ಖಾಲಿಯಲ್ಲಿನ ಭೂಕಬಳಿಕೆ ಮತ್ತು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಟಿಎಂಸಿ ಮುಂಖಂಡ ಶೇಖ್‌ ಶಾಜಹಾನ್‌ನನ್ನು 72 ಗಂಟೆಯೊಳಗೆ ಬಂಧಿಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದಬೋಸ್‌, ಮಮತಾಬ್ಯಾನರ್ಜಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಕೋಲ್ಕತಾ: ಸಂದೇಶ್‌ಖಾಲಿಯಲ್ಲಿನ ಭೂಕಬಳಿಕೆ ಮತ್ತು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಟಿಎಂಸಿ ಮುಂಖಂಡ ಶೇಖ್‌ ಶಾಜಹಾನ್‌ನನ್ನು 72 ಗಂಟೆಯೊಳಗೆ ಬಂಧಿಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದಬೋಸ್‌, ಮಮತಾಬ್ಯಾನರ್ಜಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಒಂದು ವೇಳೆ ಈ ಸಮಯದಲ್ಲಿ ಬಂಧನವಾಗದಿದ್ದರೆ ಸಂದೇಶ್‌ಖಾಲಿಗೆ ತನ್ನ ಕಚೇರಿಯನ್ನು ಬದಲಿಸುವುದಾಗಿ ಹೇಳಿದ್ದಾರೆ.

ಈ ಸಂಬಂಧ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ‘ಸಂದೇಶ್‌ಖಾಲಿಯಲ್ಲಿ ಅತ್ಯಾಚಾರಕ್ಕೆ ತುತ್ತಾದ ಮಹಿಳೆಯರ ಪುನರ್ವಸತಿಗೆ ಸರ್ಕಾರ ಯೋಜನೆಯನ್ನು ರೂಪಿಸಬೇಕು. ಪ್ರಮುಖ ಆರೋಪಿಯನ್ನು 72 ಗಂಟೆಯೊಳಗೆ ಬಂಧಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.ಕಳೆದ ವಾರವೂ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಅವರು, ಸಂದೇಶ್‌ಖಾಲಿಗೆ ಭೇಟಿ ನೀಡಿದ್ದ ಸಮಯದಲ್ಲಿ ಹಲವು ಮಹಿಳೆಯರು ನನ್ನ ಜೊತೆ ಮಾತನಾಡಿದ್ದರು. ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಇದನ್ನು ಸರ್ಕಾರ ಒದಗಿಸಬೇಕು. ಇದನ್ನಷ್ಟೇ ನಾವು ಸರ್ಕಾರವೊಂದರಿಂದ ಬಯಸುವುದು’ ಎಂದು ಹೇಳಿದ್ದರು.

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಸ್ಥಳೀಯ ಟಿಎಂಸಿ ನಾಯಕ ಶೇಖ್‌ ಶಾಜಹಾನ್‌ ಹಾಗೂ ಆತನ ಸಹಚರರು ಭೂಕಬಳಿಕೆ ಮಾಡಿದ್ದಲ್ಲದೇ, ಸ್ಥಳೀಯ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕೃತ್ಯವನ್ನು ವಿರೋಧಿಸಿ ಮಹಿಳೆಯರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಲ್ಲದೇ, ಆರೋಪಿಗಳ ಮನೆಗೆ ಬೆಂಕಿ ಹಚ್ಚಿದ್ದಾರೆ.