ಪಶ್ಚಿಮ ಬಂಗಾಳದಲ್ಲಿ ದೇಶದ 2ನೇ ಬುಲೆಟ್‌ ರೈಲನ್ನು ಆರಂಭಿಸಲಾಗುವುದು. ಇದು ದೆಹಲಿಯನ್ನು ಈಶಾನ್ಯದ ಹೆಬ್ಬಾಗಿಲು ಸಿಲಿಗುರಿಯೊಂದಿಗೆ ಸಂಪರ್ಕಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಶನಿವಾರ ಘೋಷಿಸಿದ್ದಾರೆ.

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ದೇಶದ 2ನೇ ಬುಲೆಟ್‌ ರೈಲನ್ನು ಆರಂಭಿಸಲಾಗುವುದು. ಇದು ದೆಹಲಿಯನ್ನು ಈಶಾನ್ಯದ ಹೆಬ್ಬಾಗಿಲು ಸಿಲಿಗುರಿಯೊಂದಿಗೆ ಸಂಪರ್ಕಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಶನಿವಾರ ಘೋಷಿಸಿದ್ದಾರೆ.

‘ಸದ್ಯ 508 ಕಿ.ಮೀ. ದೂರದ ಮುಂಬೈ-ಅಹಮದಾಬಾದ್‌ ಬುಲೆಟ್‌ ರೈಲು ಸಿದ್ಧ

ಕೋಲ್ಕತಾದಲ್ಲಿ ರೈಲ್ವೆ ಮೂಲಸೌಕರ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸದ್ಯ 508 ಕಿ.ಮೀ. ದೂರದ ಮುಂಬೈ-ಅಹಮದಾಬಾದ್‌ ಬುಲೆಟ್‌ ರೈಲು ಸಿದ್ಧವಾಗುತ್ತಿದ್ದು, ಮುಂದಿನ ವರ್ಷದಿಂದ ಕಾರ್ಯಾಚರಿಸಲಿದೆ. 2ನೇ ಬುಲೆಟ್‌ ರೈಲು ಪಶ್ಚಿಮ ಬಂಗಾಳಕ್ಕೆ ಬರಲಿದೆ. ಇದು ದೆಹಲಿಯನ್ನು ಲಖನೌ, ವಾರಾಣಸಿ, ಪಟನಾ ಮೂಲಕ ಸಿಲಿಗುರಿಗೆ ಸಂಪರ್ಕಿಸಲಿದೆ. ಇದು ಪ್ರಯಾಣದ ಸಮಯವನ್ನು ಸದ್ಯದ 20 ಗಂಟೆಗಳಿಂದ ಕೇವಲ 6 ಗಂಟೆಗಳಿಗೆ ಇಳಿಸುತ್ತದೆ’ ಎಂದು ತಿಳಿಸಿದರು.

ಸಿಲಿಗುರಿ ಹಾಗೂ ದೆಹಲಿ ಅಂತರ ಸುಮಾರು 1500 ಕಿ.ಮೀ. ಆಗಿದ್ದು, ರಾಜಧಾನಿ ಎಕ್ಸ್‌ಪ್ರೆಸ್‌ ರೈಲು 21 ಗಂಟೆಯಲ್ಲಿ ದೆಹಲಿ ತಲುಪುತ್ತದೆ. ಮಿಕ್ಕ ರೈಲುಗಳು ವಿವಿಧ ಮಾರ್ಗ, ದೂರ ಹಾಗೂ ಅವುಗಳ ವೇಗಮಿತಿ ಆಧರಿಸಿ ಸುಮಾರು 25ರಿಂದ 36 ಗಂಟೆ ತೆಗೆದುಕೊಳ್ಳುತ್ತವೆ.

ಸುವೇಂದು ಅಧಿಕಾರಿಯವರಿಗೆ ವೈಷ್ಣವ್‌ ಅಭಿನಂದನೆ

 ಈ ವೇಳೆ ಹೊಸತಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸುವೇಂದು ಅಧಿಕಾರಿಯವರಿಗೆ ವೈಷ್ಣವ್‌ ಅಭಿನಂದನೆ ತಿಳಿಸಿದರು. ಇಂಧನ ಮಿತವ್ಯಯದ ಉದ್ದೇಶದಿಂದ ಆಟೋರಿಕ್ಷಾ, ಮೆಟ್ರೋದಲ್ಲಿ ಸಂಚರಿಸಿ ಗಮನ ಸೆಳೆದರು.