ಸಾರಾಂಶ
ಲೋಕಸಭೆ ಚುನಾವಣೆಯಲ್ಲಿ ಟಿಎಂಸಿಗೆ ಮತ ಹಾಕುವ ಬದಲು ಬಿಜೆಪಿಗೆ ಮತ ಹಾಕುವುದು ಮೇಲು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಕೋಲ್ಕತಾ: ಲೋಕಸಭೆ ಚುನಾವಣೆಯಲ್ಲಿ ಟಿಎಂಸಿಗೆ ಮತ ಹಾಕುವ ಬದಲು ಬಿಜೆಪಿಗೆ ಮತ ಹಾಕುವುದು ಮೇಲು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಬೆಹ್ರಾಂಪುರದಲ್ಲಿ ಚುನಾವಣಾ ಭಾಷಣ ಮಾಡಿದ ಅಧೀರ್, ‘ಟಿಎಂಸಿಗೆ ಮತ ಹಾಕಿದರೆ ಅದು ಬಿಜೆಪಿಗೆ ಮತ ಹಾಕಿದಂತೆ. ಹಾಗಾಗಿ ಟಿಎಂಸಿ ಬದಲು ಬಿಜೆಪಿಗೆ ಮತ ಹಾಕುವುದು ಮೇಲು. ಹಾಗಾಗಿ ಎಲ್ಲರೂ ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಿ’ ಎಂದು ಹೇಳಿದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಎಂಸಿ,‘ಅಧೀರ್ ತಾವು ಬಿಜೆಪಿಯ ಬಿ ಟೀಂ ಎಂದು ಪುನಃ ಸಾಬೀತುಪಡಿಸಿಕೊಂಡಿದ್ದಾರೆ. ಅವರು ಬಂಗಾಳದಲ್ಲಿ ಬಿಜೆಪಿಯ ಧನಿಯಾಗಿದ್ದಾರೆ. ಬಂಗಾಳದ ಸಂಸ್ಕೃತಿಯನ್ನು ಪ್ರೀತಿಸುವವರು ಯಾರೂ ಸಹ ಬಿಜೆಪಿ ಪರ ಮತಯಾಚನೆ ಮಾಡುವುದಿಲ್ಲ’ ಎಂದು ಟೀಕಿಸಿತು.