2022 ಮತ್ತು 2026ರ ನಡುವೆ ಕರ್ನಾಟಕದಲ್ಲಿ ಒಬ್ಬರು ಸೇರಿ ಸುಮಾರು 111 ಸಂಸದರು ಮತ್ತು ಶಾಸಕರು ಚುನಾವಣೆಯಲ್ಲಿ ಗೆದ್ದ ಬಳಿಕ ಪಕ್ಷ ಬದಲಿಸಿದ್ದಾರೆ. ನಾಗಾಲ್ಯಾಂಡ್‌ ಮತ್ತು ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಶಾಸಕರು, ಸಂಸದರು ಈ ರೀತಿ ಪಕ್ಷ ಬದಲಿಸಿದ್ದಾರೆ.

ನವದೆಹಲಿ: 2022 ಮತ್ತು 2026ರ ನಡುವೆ ಕರ್ನಾಟಕದಲ್ಲಿ ಒಬ್ಬರು ಸೇರಿ ಸುಮಾರು 111 ಸಂಸದರು ಮತ್ತು ಶಾಸಕರು ಚುನಾವಣೆಯಲ್ಲಿ ಗೆದ್ದ ಬಳಿಕ ಪಕ್ಷ ಬದಲಿಸಿದ್ದಾರೆ. ನಾಗಾಲ್ಯಾಂಡ್‌ ಮತ್ತು ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಶಾಸಕರು, ಸಂಸದರು ಈ ರೀತಿ ಪಕ್ಷ ಬದಲಿಸಿದ್ದಾರೆ. ಕರ್ನಾಟಕದಲ್ಲಿ ಈ ಅವಧಿಯಲ್ಲಿ 1 ಪಕ್ಷಾಂತರ ನಡೆದಿದೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌(ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ವಿಶ್ಲೇಷಣೆ ತಿಳಿಸಿದೆ.

ಈ ಅವಧಿಯಲ್ಲಿ ಒಟ್ಟಾರೆ 26 ಲೋಕಸಭಾ ಸದಸ್ಯರು, 7 ರಾಜ್ಯಸಭಾ ಸದಸ್ಯರು ಮತ್ತು 78 ಶಾಸಕರು ಪಕ್ಷ ಬದಲಿಸಿದ್ದಾರೆ. ಇವರಲ್ಲಿ ಕಾಂಗ್ರೆಸ್‌ನಿಂದ 19 ಮಂದಿ ಪಕ್ಷಾಂತರ ಮಾಡಿದ್ದರೆ, ಬಿಜೆಪಿಗೆ 29 ಮಂದಿ ಸೇರ್ಪಡೆ ಆಗಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ 32 ಶಾಸಕರ ಪಕ್ಷಾಂತರ:

ನಾಗಾಲ್ಯಾಂಡ್‌ನಲ್ಲಿ ಅತಿ ಹೆಚ್ಚು ಅಂದರೆ 32 ಶಾಸಕರು ಪಕ್ಷ ಬದಲಿಸಿದ್ದಾರೆ. ಇವರೆಲ್ಲ ಪ್ರಾದೇಶಿಕ ಪಕ್ಷದ ಶಾಸಕರು. ಪಶ್ಚಿಮ ಬಂಗಾಳದಲ್ಲಿ 20 ಸಂಸದರು ಈ ರೀತಿ ಪಕ್ಷಾಂತರ ಮಾಡಿದ್ದಾರೆ.

ಗೆಲುವಿನ ಪ್ರಕರಣಗಳು ಇದರ ವ್ಯಾಪ್ತಿಗೆ ಸೇರಿವೆ

ವೈಯಕ್ತಿಕ ಪಕ್ಷಾಂತರ, ಪಕ್ಷದ ವಿಲೀನ, ಉಪ ಚುನಾವಣೆ ಗೆಲುವಿನ ನಂತರದ ರಾಜೀನಾಮೆಗಳು ಹಾಗೂ ಅನರ್ಹತೆಯ ಬಳಿಕ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿನ ಪ್ರಕರಣಗಳು ಇದರ ವ್ಯಾಪ್ತಿಗೆ ಸೇರಿವೆ ಎಂದು ಎಡಿಆರ್‌ ತಿಳಿಸಿದೆ.